Advertisement

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

10:41 AM Jun 16, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇತರೆ ಆರೋಪಿಗಳ ಜೊತೆ ನಟ ದರ್ಶನ್‌ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಇನ್ನು 5 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ 13 ಮಂದಿ ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಲಾಗಿದೆ.

Advertisement

ದರ್ಶನ್‌ ಅವರ ಬಂಧನ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್‌ ನೀಡಿದ್ದು, ದರ್ಶನ್‌ ಕುಟುಂಬಕ್ಕೆ ಮಾನಸಿಕವಾಗಿ ಆಘಾತವನ್ನು ನೀಡಿದೆ. ಪತ್ನಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದಾರೆ. ಇತ್ತ ದರ್ಶನ್‌ ಅವರು ಹೆಚ್ಚಾಗಿ ಪ್ರೀತಿಸುವ ಪುತ್ರ ವಿನೀಶ್‌ ಕುಗ್ಗಿಹೋಗಿದ್ದಾರೆ.

ಪ್ರತಿ ವರ್ಷ ಫಾದರ್ಸ್‌ ಡೇಗೆ ತಂದೆ ಜೊತೆಗಿನ ಸುಂದರ ಫೋಟೋಗಳನ್ನು ವಿಶ್ ಮಾಡುತ್ತಿದ್ದ ವಿನೀಶ್ ಈ ಬಾರಿ ಬಹಳ ದುಃಖದಿಂದ ಫಾದರ್ಸ್‌ ಡೇಗೆ ಫೋಟೋಗಳನ್ನು ಹಾಕಿಕೊಂಡಿದ್ದಾರೆ.

“ಹ್ಯಾಪಿ ಫಾದರ್ಸ್‌ ಡೇ ಅಪ್ಪಾ.. ನಾನು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಐ ಲವ್‌ ಯೂ, ನೀವು ಯಾವಾಗಲೂ ನನ್ನ ಹೀರೋ..” ಎಂದು ತಂದೆ – ತಾಯಿ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದರ್ಶನ್‌ ಬಂಧನವಾದ ಬಳಿಕ ಅನೇಕರು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕೆಲ ಕೀಳುಮಟ್ಟದ ಕಮೆಂಟ್‌ ಮಾಡಿದ್ದರು. ಇದರಿಂದ ಮನನೊಂದಿದ್ದ ವಿನೀಶ್‌ “ನನ್ನ ಅಪ್ಪನ ಬಗ್ಗೆ ಕೆಟ್ಟ ಹಾಗೂ ಆಶ್ಲೀಲ ಭಾಷೆಯಲ್ಲಿ ಕಮೆಂಟ್‌ ಮಾಡಿ ನಿಂದಿಸುತ್ತಿರುವ ನಿಮ್ಮಗೆಲ್ಲರಿಗೆ ಧನ್ಯವಾದ. ನಾನು 15 ವರ್ಷದ ಬಾಲಕನಾಗಿರಬಹುದು ಆದರೆ ನನಗೂ ಭಾವನೆಗಳಿವೆ ಎನ್ನುವುದನ್ನು ನೀವೆಲ್ಲ ಪರಿಗಣಿಸಲೇ ಇಲ್ಲ. ಇಂಥ ಕಷ್ಟದ ಸಮಯದಲ್ಲಿ ನನ್ನ ತಂದೆ -ತಾಯಿಗೆ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ.  ನೀವು ನನಗೆ ನಿಂದಿಸಿ ಕಮೆಂಟ್‌ ಮಾಡುವುದರಿಂದ ಯಾವುದೇ ಬದಲಾವಣೆ ಆಗಲು ಸಾಧ್ಯವಿಲ್ಲ” ಎಂದು ದುಃಖದಲ್ಲಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಸ್ಟೋರಿ ಹಂಚಿಕೊಂಡಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next