Advertisement

“ಬಾಸ್’ನಂಬರಿನ ಬೈಕ್ ಚಲಾಯಿಸಿದ ದರ್ಶನ್

03:21 PM Jun 24, 2018 | |

ಸ್ಯಾಂಡಲ್‍ವುಡ್‍ನಲ್ಲಿ ಬಾಸ್ ಯಾರು ಎಂಬ ವಿವಾದದ ಬೆನ್ನಲ್ಲೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವೇ ಬಾಸ್ ಎನ್ನುವ ಸುಳಿವನ್ನ ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ಹೌದು! ನೆಲಮಂಗಲದ ಬಳಿ ಯಜಮಾನ ಚಿತ್ರೀಕರಣದ ವೇಳೆ ಅಭಿಮಾನಿಯ ಬೈಕ್‌ನ್ನ ಚಲಾಯಿಸುವ ಮೂಲಕ. 

Advertisement

ದರ್ಶನ್ ಅವರು ತಮ್ಮ ಅಭಿಮಾನಿ ಜಯಕಾಂತ್ ಅವರ ಹಾರ್ಲೇ ಡೇವಿಡ್ ಸನ್ ಬೈಕ್ ಓಡಿಸಿದ್ದಾರೆ. ಇದರಲ್ಲಿ ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ದರ್ಶನ್ ಚಲಾಯಿಸಿದ ಬೈಕ್‌ನ ನಂಬರ್ KA-51 HD 8055. ಇದು ಬಾಸ್ ಎಂದು ಅರ್ಥ ಕೊಡುವ ನಂಬರ್.

ಅಂದ ಹಾಗೇ, ದರ್ಶನ್ ಅಭಿಮಾನಿ ಜಯಕಾಂತ್ ಈ ಫ್ಯಾನ್ಸಿ ನಂಬರ್ ಪಡೆಯಲು 30 ಸಾವಿರ ಹಣ ಖರ್ಚು ಮಾಡಿದ್ದು, ಮೂರು ವಾರದ ಹಿಂದೆ ನೊಂದಣಿ ಮಾಡಿಸಿದ್ದಾರೆ. ಅಸಲಿಗೆ ದರ್ಶನ್‍ ಈ ಹಿಂದೆಯೇ ಬೈಕ್ ಸವಾರಿ ಮಾಡಬೇಕಿತ್ತು. ಆದರೆ ಅವರ ಬ್ಯುಸಿ ಶ್ಯೆಡ್ಯೂಲ್‌ನಿಂದ ಇದು ಸಾಧ್ಯವಾಗಿರಲಿಲ್ಲ. ಹಾಗಾಗಿ ಇದು ಈಗ ಸಾಧ್ಯವಾಗಿದೆ ಎಂದರು ಜಯಕಾಂತ್.

ಇನ್ನು ಮೊನ್ನೆಯಷ್ಟೇ ಯಶ್ ತಮ್ಮ ಹೊಸ ಬೆಂಜ್ ಕಾರಿಗೆ KA 05 – MY 8055 ಬಾಸ್ ಎಂದು ಅರ್ಥ ಕೊಡುವ ನಂಬರ್ ನೊಂದಣಿ ಮಾಡಿಸಿದ್ದರು. ಅಲ್ಲದೇ ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ ಈಗ ಇದೇ ದರ್ಶನ್ ಅಭಿಮಾನಿಗಳು ದರ್ಶನ್ ಅವರು ಬಾಸ್ ಎಂಬ ಅರ್ಥ ಕೊಡುವ ಬೈಕ್ ಸವಾರಿ ಮಾಡಿದ್ದರಿಂದ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next