Advertisement

ಕ್ಯಾಮರಾದೊಂದಿಗೆ ಕಾಡಲ್ಲಿ ದರ್ಶನ್‌

10:09 AM Jan 28, 2020 | Team Udayavani |

ದರ್ಶನ್‌ ಸಿನಿಮಾ ಕೆಲಸದ ಬಿಡುವಿನ ವೇಳೆಯನ್ನು ತಮ್ಮ ಇಷ್ಟದ ಹವ್ಯಾಸಗಳಿಗೆ ಮೀಸಲಿಡುತ್ತಾರೆ. ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಕುದುರೆ ಸವಾರಿ, ತೋಟ ಸುತ್ತಾಟದ ಜೊತೆಗೆ ದರ್ಶನ್‌ ಇಷ್ಟವಾದ ಮತ್ತೂಂದು ಹವ್ಯಾಸವೆಂದರೆ ಫೋಟೋಗ್ರಫಿ.

Advertisement

ಕಾಡಿಗೆ ತೆರಳಿ, ಪ್ರಾಣಿ ಪಕ್ಷಿಗಳ ಫೋಟೋಗ್ರಫಿ ಮಾಡೋದು ದರ್ಶನ್‌ ನೆಚ್ಚಿನ ಹವ್ಯಾಸಗಳಲ್ಲೊಂದು. ಕಳೆದ ಬಾರಿ ದರ್ಶನ್‌ ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗಿತ್ತು. ಈಗ ದರ್ಶನ್‌ ಮತ್ತೆ ಕ್ಯಾಮರಾ ಹೆಗಲೇರಿಸಿಕೊಂಡು ಕಾಡಿಗೆ ತೆರಳಿದ್ದಾರೆ. ಈ ಬಾರಿ ಅವರ ಫೋಕಸ್‌ ಅಪರೂಪದ ಪಕ್ಷಿಗಳನ್ನು ಸೆರೆಹಿಡಿಯುವುದು ಎನ್ನಲಾಗಿದೆ.

ಈ ಸೀಸನ್‌ನಲ್ಲಿ ಬೇರೆ ಬೇರೆ ಕಡೆಯಿಂದ ಪಕ್ಷಿಗಳು ಬರುವ ಜಾಗವೊಂದಕ್ಕೆ ದರ್ಶನ್‌ ಹೋಗಿದ್ದಾರೆನ್ನಲಾಗಿದ್ದು, ಈ ಮೂಲಕ ಅಪರೂಪದ ಫೋಟೋ ಸೆರೆಹಿಡಿಯಲಿದ್ದಾರೆ. ದರ್ಶನ್‌ ಫೋಟೋಗ್ರಫಿಗೆ ಸಿದ್ಧವಾಗಿರುವ ಫೋಟೋವೊಂದನ್ನು ಹಾಕಿ, ಅಭಿಮಾನಿಗಳಿಗೆ ಗಣರಾಜ್ಯೋತ್ಸವ ಶುಭ ಕೋರಿದ್ದಾರೆ ಕೂಡಾ.

Advertisement

Udayavani is now on Telegram. Click here to join our channel and stay updated with the latest news.

Next