Advertisement

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

03:28 PM Jun 14, 2024 | Team Udayavani |

ಬೆಂಗಳೂರು/ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ನಟಿ ಪವಿತ್ರಾ ಗೌಡ ಸೇರಿದಂತೆ ಈಗಾಗಲೇ 15 ಮಂದಿಯನ್ನು ಬಂಧಿಸಲಾಗಿದ್ದು, ಏತನ್ಮಧ್ಯೆ ಸ್ಯಾಂಡಲ್‌ ವುಡ್‌ ನಟಿ ಸಂಜನಾ ಗರ್ಲಾನಿ ಪ್ರತಿಕ್ರಿಯೆ ನೀಡಿ, ಇದು ಕನ್ನಡ ಚಿತ್ರರಂಗಕ್ಕೆ ಕರಾಳ ದಿನವಾಗಿದೆ ಎಂದು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:POCSO Case; ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ: ಸಚಿವ ಎಂ.ಬಿ. ಪಾಟೀಲ

ನಿನ್ನೆ(ಬುಧವಾರ) ನನಗೆ ಕರಾಳ ದಿನವಾಗಿದೆ ಹಾಗೂ ಇದು ಕನ್ನಡ ಚಿತ್ರರಂಗಕ್ಕೆ ಪ್ರಳಯದ ದಿನದಂತಾಗಿದೆ ಎಂದು ಗರ್ಲಾನಿ, ದರ್ಶನ್‌ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾದ ಘಟನೆ ಕುರಿತು ಎನ್‌ ಡಿಟಿವಿ ಜತೆ ಮಾತನಾಡುತ್ತ ಈ ಪ್ರತಿಕ್ರಿಯೆ ನೀಡಿದ್ದು, ಕನ್ನಡ ಸಿನಿಮಾರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ ಎಂಬುದಾಗಿ ಬಣ್ಣಿಸಿದ್ದಾರೆ.

ಜನರು ಕೇವಲ ಅವರ ಸಿನಿಮಾವನ್ನು ವೀಕ್ಷಿಸುವುದು ಮಾತ್ರವಲ್ಲ, ಜನರು ಅವರನ್ನು ಅಪಾರವಾಗಿ ಪೂಜಿಸುತ್ತಾರೆ, ಅವರು ಅದಕ್ಕಿಂತಲೂ ಮಿಗಿಲಾದವರು. ದರ್ಶನ್‌ ಗೌರವಯುತ ನಡವಳಿಕೆ ಹೊಂದಿದ್ದು, ಶೂಟಿಂಗ್‌ ಸಂದರ್ಭದಲ್ಲಿ ಅವರು ನನ್ನ ಹೆಸರು ಹೇಳಿ ಕರೆಯುತ್ತಿರಲಿಲ್ಲ, ಅವರು ನನ್ನ ಜೀ ಹಾಗೂ ಅಮ್ಮಾ ಎಂದೇ ಹೇಳುತ್ತಿದ್ದರು. ಇದು ಮಹಿಳೆಯರನ್ನು ಅವರು ಎಷ್ಟು ಗೌರವಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಗರ್ಲಾನಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಅವರೊಬ್ಬ ಮೃದುಭಾಷಿ ಜಂಟಲ್‌ ಮ್ಯಾನ್‌, ಆ ಕಾರಣದಿಂದಾಗಿ ಅವರು ಯಾವುದೇ ಮಹಿಳೆ ಜತೆ ಮಾತನಾಡುತ್ತಿದ್ದರು. ಸಿನಿಮಾದಲ್ಲಿ ನನ್ನ ಎತ್ತಿಕೊಳ್ಳುವ ದೃಶ್ಯವಿದ್ದರೆ, ಅವರು ಆ ಬಗ್ಗೆ ನನ್ನ ಬಳಿ ಚರ್ಚಿಸುತ್ತಿದ್ದರು. ಅವರು ಮಹಿಳೆಯರನ್ನು ಗೌರವಿಸುತ್ತಿದ್ದರು ಎಂದು ಸಂಜನಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next