Advertisement

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

03:00 PM May 25, 2022 | Team Udayavani |

ಸ್ಟಾರ್‌ ಕಪಲ್‌ ಕೃಷ್ಣ ಮತ್ತು ಮಿಲನಾ ಜೋಡಿ ಮತ್ತೂಮ್ಮೆ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದೆ. ಅದು “ಲವ್‌ ಬರ್ಡ್ಸ್‌’ ಸಿನಿಮಾದ ಮೂಲಕ.

Advertisement

ಹೌದು, ಮತ್ತೆ ತೆರೆಮೇಲೆ ಕೃಷ್ಣ ಮತ್ತು ಮಿಲನಾ ಜೋಡಿ ಯಾವ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಪ್ರಿಯರು ಕೇಳುತ್ತಿರುವಾಗಲೇ, “ಲವ್‌ ಬರ್ಡ್ಸ್‌’ ಚಿತ್ರತಂಡದ ಕಡೆಯಿಂದ ಇಂಥದ್ದೊಂದು ಸುದ್ದಿ ಹೊರಬಿದ್ದಿದೆ.

ಅಂದಹಾಗೆ, ಪಿ. ಸಿ ಶೇಖರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಲವ್‌ ಬರ್ಡ್ಸ್‌’ ಸಿನಿಮಾದ ಮುಹೂರ್ತ ನೆರವೇರಿದ್ದು, ಸದ್ಯ ಚಿತ್ರದ ಚಿತ್ರೀಕರಣ ಚಟುವಟಿಕೆಗಳಿಗೂ ಚಿತ್ರತಂಡ ಚಾಲನೆ ನೀಡಿದೆ.

ಡಾರ್ಲಿಂಗ್‌ ಕೃಷ್ಣ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಚಿತ್ರದ ನಾಯಕಿಯ ಪಾತ್ರಕ್ಕೆ ಮಿಲನಾ ನಾಗರಾಜ್‌ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಥಿಯೇಟರ್‌ಗೆ ಬರ್ತಿದ್ದಾನೆ “ಕಿರಿಕ್‌ ಶಂಕರ್‌ “

Advertisement

ಈ ಬಗ್ಗೆ ಮಾತನಾಡುವ ನಿರ್ದೇಶಕ ಪಿ.ಸಿ ಶೇಖರ್‌, “ಈ ಹಿಂದೆ ಔಟ್‌ ಆ್ಯಂಡ್‌ ಔಟ್‌ ಲವ್‌ ಸಬ್ಜೆಕ್ಟ್ ಸಿನಿಮಾ “ಲವ್‌ ಮಾಕ್ಟೇಲ್‌’ನಲ್ಲಿ ಕೃಷ್ಣ ಮತ್ತು ಮಿಲನಾ ಅವರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆದರೆ ಆನಂತರ ಈ ಜೋಡಿ ಮತ್ತೆ ಯಾವ ಸಿನಿಮಾದಲ್ಲೂ ಒಟ್ಟಿಗೆ ಅಭಿನಯಿಸಿರಲಿಲ್ಲ. ಈಗ ನಮ್ಮ “ಲವ್‌ ಬರ್ಡ್ಸ್‌’ ಸಿನಿಮಾದಲ್ಲಿ ಮತ್ತೆ ಕೃಷ್ಣ ಮತ್ತು ಮಿಲನಾ ಒಟ್ಟಿಗೆ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

“ಲವ್‌ ಬರ್ಡ್ಸ್‌’ ಕೂಡ ಒಂದು ಅಪ್ಪಟ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಸಿನಿಮಾ. ಮದುವೆಯಾದ ನಂತರ ಲವರ್ ಹೇಗಿರುತ್ತಾರೆ ಅನ್ನೋದರ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ.ಹಾಗಾಗಿ ಈ ಪಾತ್ರಕ್ಕೆ ಕೃಷ್ಣ ಮತ್ತು ಮಿಲನಾ ಅವರೇ ಸೂಕ್ತ ಎಂಬ ಕಾರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಪಾತ್ರದ ಆಯ್ಕೆಯ ಬಗ್ಗೆ ವಿವರಣೆ ಕೊಡುತ್ತಾರೆ.

“ಗಂಡ-ಹೆಂಡತಿ ನಡುವಿನ ಬಾಂಧವ್ಯ, ಅನ್ಯೋನ್ಯತೆ ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲಿ ಕೃಷ್ಣ ಮತ್ತು ಮಿಲನಾ ಅವರ ಪಾತ್ರದಲ್ಲಿ ತೋರಿಸಲಾಗುತ್ತಿದೆ. ಈ ಪಾತ್ರಕ್ಕೆ ಕೃಷ್ಣ ಮತ್ತು ಮಿಲನಾ ಅವರಿಗಿಂತ ಉತ್ತಮವಾದ ಆಯ್ಕೆ ನಮ್ಮ ಮುಂದಿರಲಿಲ್ಲ’ ಎನ್ನುವುದು “ಲವ್‌ ಬರ್ಡ್ಸ್‌’ ಚಿತ್ರತಂಡದ ಮಾತು.

ಇನ್ನು ಕಡ್ಡಿಪುಡಿ ಚಂದ್ರು “ಲವ್‌ ಬರ್ಡ್ಸ್‌’ ಸಿನಿಮಾವನ್ನು ನಿರ್ಮಿಸುತ್ತಿದ್ದು, ಇದೇ ಅಕ್ಟೋಬರ್‌ವೇಳೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next