ಬೆಂಗಳೂರು: ಕೇಂದ್ರ ಸರ್ಕಾರ 1000, 500 ರೂ. ಮುಖಬೆಲೆಯ ನೋಟು ರದ್ದುಪಡಿಸಿದ ಕ್ರಮಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ರಾಜ್ಯಾದ್ಯಂತ ಕರಾಳ ದಿನ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಈ ಸಂಬಂಧ ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ “ದೇಶ
ನರಳುತ್ತಿದೆ’ ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಸಭೆ ನಂತರ ಮಾತನಾಡಿದ ದಿನೇಶ್
ಗುಂಡೂರಾವ್, ಪ್ರಧಾನಿ ನರೇಂದ್ರ ಮೋದಿ ಅವರು ಏಕಾಏಕಿ ನೋಟ್ ಬ್ಯಾನ್ ಮಾಡಿದ್ದರಿಂದ ಜನರು ಸಂಕಷ್ಟಕ್ಕೆ
ಒಳಗಾಗಿದ್ದಾರೆ.
ಪ್ರಧಾನಿಯ ಮೂರ್ಖ ತನದ ತೀರ್ಮಾನದ ವಿರುದ್ಧ ಬುಧವಾರ ಕಾಂಗ್ರೆಸ್ ಪಕ್ಷದಿಂದ “ದೇಶ ನರಳುತ್ತಿದೆ’ ಎಂಬ ಘೋಷಣೆಯಡಿ ಕರಾಳ ದಿನ ಆಚರಿಸಲಾಗುತ್ತಿದೆ. ಜೊತೆಗೆ ನೋಟ್ ಬ್ಯಾನ್‌ನಿಂದಾಗಿ ಮಡಿದ ನಾಗರಿಕರಿಗೆ ಸಂಜೆ ನಗರದ ಬ್ರಿಗೇಡ್ ರಸ್ತೆಯ ವಾರ್ ಮೆಮೊರಿಯಲ್ ಬಳಿ ಸಂತಾಪ ಸೂಚಿಸಲಾ ಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಉಗ್ರಪ್ಪ, ದೇಶದ ಆರ್ಥಿಕ ಇತಿಹಾಸದಲ್ಲಿ 2016ರ ನವೆಂಬರ್ 8 ಕರಾಳ ರಾತ್ರಿಯಾಗಿದೆ. ಪ್ರಧಾನಿ ಮೋದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ ವಿರುದ್ಧವಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.