ಚಿಕ್ಕಮಗಳೂರು: ದರ್ಗಾ ವರ್ಸಸ್ ದೇವಾಲಯ ದಂಗಲ್ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆರಂಭವಾಗಿದ್ದು, ದರ್ಗಾವಲ್ಲ ದೇವಾಲಯ ಎಂದು ಹಿಂದೂ ಸಂಘಟನೆ ಹೋರಾಟಕ್ಕೆ ಸಿದ್ದತೆ ನಡೆಸಿವೆ.
ಚಿಕ್ಕಮಗಳೂರು ತಾಲೂಕಿನ ಮಹಜಿದ್ ಗ್ರಾಮದಲ್ಲಿರುವ ಹಜರತ್ ಸೈಯದ್ ಬೂದ್ ಷಾ ದರ್ಗಾವು ಚಂದ್ರಮೌಳೇಶ್ವರ ದೇವಾಲಯ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಿರುವ ಪುರಾತನ ದರ್ಗಾದ ಒಳಗಿರುವ ಪುರಾತನ ಕಲ್ಲಿನ ಕಂಬದಲ್ಲಿ ಹೂವಿನ ಚಿತ್ರಗಳ ಕೆತ್ತನೆಗಳಿವೆ. ಹೀಗಾಗಿ ದರ್ಗಾದೊಳಗೆ ಹಿಂದೂ ದೇವಾಲಯದ ಕುರುಹುಗಳಿರುವುದಾಗಿ ಶಂಕೆ ವ್ಯಕ್ತವಾಗಿದೆ.
ವಕ್ಫ್ ಬೋರ್ಡ್ ಅಧೀನದಲ್ಲಿರುವ ದರ್ಗಾದ ನವೀಕರಣಕ್ಕೆ 8 ಲಕ್ಷ ರೂಪಾಯಿ ಮಂಜೂರಾಗಿದೆ. ಆದರೆ ದರ್ಗಾದ ನವೀಕರಣ, ಗುಂಬಜ್ ಕಾಮಗಾರಿಗೆ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ಇದನ್ನೂ ಓದಿ:ನೀವು ಕೇವಲ ಪ್ರಧಾನಿ ಮಾತ್ರ, ದೇವರಲ್ಲ: ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ
Related Articles
ಟಿಪ್ಪು ಸುಲ್ತಾನ್ ಕಾಲದಲ್ಲಿ ದೇವಾಲಯ ನಾಶ ಮಾಡಿ ದರ್ಗಾ ಮಾಡಲಾಗಿದೆ. ಕಟ್ಟೆಗದ್ದೆ ಹೆಸರನ್ನು ಮಹಜಿದ್ ಗ್ರಾಮವೆಂದು ಬದಲಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಕಾರ್ಯಕರ್ತರು ಅಭಿಯಾನ ಆರಂಭ ಮಾಡಿದ್ದಾರೆ.
ಇಂದಿನಿಂದ ದರ್ಗಾದಲ್ಲಿ ಉರುಸ್ ಆರಂಭವಾಗಲಿದ್ದು, ಹಿಂದೂ ಸಂಘಟನೆಗಳ ವಿರೋಧ ಹಿನ್ನೆಲೆ ಪೋಲಿಸ್ ಬಿಗಿ ಭದ್ರತೆ ವಹಿಸಲಾಗಿದೆ.