ಚಿಕ್ಕಮಗಳೂರು: ಕಾಫಿನಾಡಲ್ಲಿ ದರ್ಗಾ ಹಾಗೂ ದೇವಾಲಯ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಡಿ.ಪಿ.ಐ. ಮುಖಂಡರು ಇಂದು (ಮಾ. 14) ವಿವಾದತ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.
ಕೂದುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಹಜಿದ್ ನಗರದಲ್ಲಿರುವ ದರ್ಗಾಕ್ಕೆ ಎಸ್.ಡಿ.ಪಿ.ಐ ಮುಖಂಡರು ಹಜರತ್ ಸೈಯದ್ ಬೂದ್ ಷಾ ದರ್ಗಾಕ್ಕೆ ಭೇಟಿ ನೀಡಲಿದ್ದು, ದರ್ಗಾ ಕಮಿಟಿ ಸದಸ್ಯರ ಜೊತೆಗೆ ಸಭೆ ನಡೆಸಲಿದ್ದಾರೆ.
ಹಿಂದೂ ಸಂಘಟನೆಗಳು ಇದು ದರ್ಗಾವಲ್ಲ, ಹಿಂದೂಗಳ ಚಂದ್ರಮೌಳೇಶ್ವರ ದೇವಾಲಯ ಎಂದು ಪಟ್ಟು ಹಿಡಿದಿರುವ ಹಿನ್ನೆಲೆ, ಈ ವಿವಾದಕ್ಕೆ ಎಸ್.ಡಿ.ಪಿ.ಐ. ಮುಖಂಡರು ಎಂಟ್ರಿಯಾಗಿದ್ದಾರೆ.
ನೆನ್ನೆಯಿಂದ ದರ್ಗಾದಲ್ಲಿ ಉರುಸ್ ಆರಂಭವಾಗಿದ್ದು, ಇಂದು ನಡೆಯಲಿರುವ ಉರುಸ್ ಗೆ ಸಾವಿರಾರು ಮುಸ್ಲಿಂ ಸಮುದಾಯದವರು ಭಾಗಿಯಾಗಲಿದ್ದಾರೆ. ದರ್ಗಾದ ಬಳಿ ನೂರಾರು ಪೊಲೀಸರ ನಿಯೋಜನೆಯಾಗಿದೆ.