Advertisement

ದರ್ಭಾಂಗ ಶಿರಚ್ಛೇದನ: ವೈಯಕ್ತಿಕ ದ್ವೇಷ ಕಾರಣ, ಮೋದಿಗೆ ಸಂಬಂಧವಿಲ್ಲ

10:47 AM Mar 17, 2018 | udayavani editorial |

ದರ್ಭಾಂಗ  : ನಗರ ಹೊರವಲಯದಲ್ಲಿನ ಖಾಸಗಿ ಜಾಗವೊಂದರಲ್ಲಿನ ಚೌಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಇರಿಸಿದ ಕಾರಣಕ್ಕೆ ಉದ್ರಿಕ್ತ ಸಮೂಹವೊಂದು 65ರ ಹರೆಯದ ವ್ಯಕ್ತಿಯೋರ್ವ ತಲೆ ಕಡಿದ ಭೀಭತ್ಸಕರ ಘಟನೆ ನಡೆದ ಒಂದು ದಿನದ ತರುವಾಯ ಪ್ರಕರಣದ ಕೂಲಂಕಷ ತನಿಖೆ ನಡೆಸಿರುವ ಪೊಲೀಸರು, ವ್ಯಕ್ತಿಯ ತಲೆ ಕಡಿದ ಘಟನೆ ನಡೆದಿದ್ದು  ವೈಯಕ್ತಿಕ ದ್ವೇಷದಿಂದಾಗಿಯೇ ಹೊರತು ಈ ಘಟನೆಗೂ ಪ್ರಧಾನಿ ಹೆಸರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಜಮೀನಿನ ವಿವಾದಕ್ಕೆ ಸಂಬಂಧಪಟ್ಟ ಹಳೇ ದ್ವೇಷದ ಕಾರಣಕ್ಕೆ ವ್ಯಕ್ತಿಯ ತಲೆ ಕಡಿದ ಘಟನೆ ನಡೆದಿದೆ. ಇದಕ್ಕೂ ಚೌಕಕ್ಕೆ ಪ್ರಧಾನಿ ಮೋದಿ ಅವರ ಹೆಸರನ್ನು ಇಟ್ಟ ಘಟನೆಗೂ ಯಾವುದೇ ಸಂಬಂಧ ಇಲ್ಲ ಮೃತನ ಮಗನನ್ನು ದೊಣ್ಣೆಯಿಂದ ಹೊಡೆದು ಹಿಂಸಿಸಲಾಗಿದೆ. ಗ್ರಾಮದಲ್ಲಿ ಈ ಘಟನೆಗೆ ಸಂಬಂಧಿಸಿ ಉದ್ರಿಕ್ತತೆ ತಲೆದೋರಿಲ್ಲ  ಎಂದು ಹಿರಿಯ ಪೊಲೀಸ್‌ ಸುಪರಿಂಟೆಂಡೆಂಟ್‌ ಸತ್ಯ ವೀರ್‌ ಸಿಂಗ್‌ ಹೇಳಿದ್ದಾರೆ. 

ಘಟನೆ ನಡೆದ ಸ್ಥಳದಲ್ಲಿ ಉದ್ರಿಕ್ತತೆ ತಲೆದೋರಿರುವುದನ್ನು ಗಮನಿಸಿ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮತುತ ನಿತ್ಯಾನಂದ ರಾಯ್‌ ಸೇರಿದಂತೆ  ಬಿಹಾರದ ಉನ್ನತ ರಾಜಕೀಯ ನಾಯಕರು ಸ್ಥಳಕ್ಕೆ ಭೇಟಿಕೊಟ್ಟು ಸಂತ್ರಸ್ತ ಕುಟುಂಬವನ್ನು ಸಂತೈಸಲಿದ್ದಾರೆ ಎಂದು ವರದಿಯಾಗಿದೆ. 

ಗ್ರಾಮದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೂ ಪೊಲೀಸರು ಗ್ರಾಮದಲ್ಲಿ ಯಾವುದೇ ಬಗೆಯ ಉದ್ರಿಕ್ತತೆ ಇಲ್ಲವೆಂದು ಹೇಳುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next