Advertisement

ಅತ್ಯಾಚಾರ ಸಾಬೀತಾದರೆ ಗುಣತಿಲಕಗೆ 14 ವರ್ಷ ಜೈಲು!

07:47 PM Nov 10, 2022 | Team Udayavani |

ಸಿಡ್ನಿ: ಅತ್ಯಾಚಾರ ಆರೋಪದ ಮೇಲೆ ಆಸ್ಟ್ರೇಲಿಯದಲ್ಲಿ ಬಂಧಿಸಲ್ಪಟ್ಟಿರುವ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸದ್ಯದ ಸ್ಥಿತಿಯಲ್ಲಿ ಅವರು ತಪ್ಪಿತಸ್ಥ ಎಂದೇ ಸಾಬೀತಾದರೆ 14 ವರ್ಷ ಜೈಲುಶಿಕ್ಷೆಗೊಳಗಾಗಬಹುದು. ಈ ಬಗ್ಗೆ ಮಹಿಳೆ ಮಾಡಿರುವ ಆರೋಪಗಳಲ್ಲಿ ಗಂಭೀರ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಅವರನ್ನು ಲಂಕಾ ಕ್ರಿಕೆಟ್‌ ಮಂಡಳಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಿದೆ. ಅಲ್ಲಿನ ಸರ್ಕಾರವೂ ಸಮಗ್ರ ತನಿಖೆಗೆ ಆದೇಶಿಸಿದೆ.

Advertisement

ಆಗಿದ್ದೇನು?: ದನುಷ್ಕ ಗುಣತಿಲಕ ಮತ್ತು ಆಸೀಸ್‌ ಮಹಿಳೆ ಡೇಟಿಂಗ್‌ ಆ್ಯಪ್‌ ಒಂದರ ಮೂಲಕ ಪರಿಚಿತರಾಗಿದ್ದರು. ನ.2ರಂದು ಇಬ್ಬರೂ ಹೊರಗೆ ಸುತ್ತಾಡಿ ಬಂದ ನಂತರ ಸಿಡ್ನಿಯ ರೋಸ್‌ ಬೇನಲ್ಲಿರುವ ಮಹಿಳೆಯ ಮನೆಯಲ್ಲಿ ಒಟ್ಟಾಗಿದ್ದರು. ಆಗ ಗುಣತಿಲಕ ನಾಲ್ಕು ಬಾರಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ನಡುವೆ ಮೂರು ಬಾರಿ ಮಹಿಳೆಗೆ ಉಸಿರುಗಟ್ಟುವಂತೆ ಮಾಡಿದ್ದಾರೆ ಎನ್ನುವುದು ಆರೋಪ. ಆಕೆಯ ಕತ್ತನ್ನು ಬಿಗಿಯಾಗಿ ಹಿಡಿದಿದ್ದ ಗುಣತಿಲಕ, ಮಹಿಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಬಿಟ್ಟಿಲ್ಲ. ಇದರಿಂದ ತಾನೆಲ್ಲಿ ಸತ್ತು ಹೋಗುತ್ತೇನೋ ಎಂದು ಮಹಿಳೆಗೆ ಗಾಬರಿಯಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಆದರೆ ಇಲ್ಲಿ ಹಲವು ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಇಬ್ಬರ ನಡುವೆ ನಾಲ್ಕು ಬಾರಿ ದೈಹಿಕ ಸಂಪರ್ಕ ನಡೆದಿದೆ. ಮಹಿಳೆಯ ಅನುಮತಿ ಇಲ್ಲದ ಪಕ್ಷದಲ್ಲಿ ನಾಲ್ಕು ಬಾರಿ ಸಂಪರ್ಕ ನಡೆಯಲು ಹೇಗೆ ಸಾಧ್ಯ? ಇದು ಅತ್ಯಾಚಾರವಾಗುವುದು ಹೇಗೆ? ಗುಣತಿಲಕ ಉಸಿರಗಟ್ಟಿಸುವಂತೆ ಆಕೆಯ ಕತ್ತನ್ನು ಒತ್ತಿ ಹಿಡಿದಿದ್ದೂ ತಪ್ಪೆನ್ನುವುದು ಶೇ.100 ಸತ್ಯ. ಮೊದಲ ಬಾರಿ ಹಾಗೆ ಮಾಡಿದಾಗಲೇ ಅವರೇಕೆ ದೂರ ಸರಿಯಲಿಲ್ಲ? ಅಲ್ಲದೇ ಇಬ್ಬರೂ ಒಪ್ಪಿಯೇ ಡೇಟಿಂಗ್‌ಗೆ ತೆರಳಿದ್ದಾರೆ. ಇದರ ಮುಂದುವರಿದ ಭಾಗವಾಗಿ ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿದ್ದಾರೆ. ಹೀಗಿರುವಾಗ ಅದು ಅತ್ಯಾಚಾರ ಎನಿಸಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲೂ ತನಿಖೆ ನಡೆಯುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next