Advertisement

Arrested: ಅಪಾಯಕಾರಿ ವ್ಹೀಲಿಂಗ್‌: ಐವರ ಬಂಧನ

12:33 PM Feb 26, 2024 | Team Udayavani |

ಬೆಂಗಳೂರು: ಅಪಾಯಕಾರಿ ವ್ಹೀಲಿಂಗ್‌ ಮಾಡುವವರ ವಿರುದ್ಧ ವಿಶೇಷ ಕಾರ್ಯಾ ಚರಣೆ ಮುಂದುವರಿಸಿರುವ ಸಂಚಾರ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ, ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

Advertisement

ಎಚ್‌ಎಸ್‌ಆರ್‌ ಲೇಔಟ್‌ನ ಸಾಗರ್‌ (22), ಮೊಹಮ್ಮದ್‌ ಬಾಲಾ(23), ರಾಯನ್‌(20), ಸೈಯದ್‌ ಅಬ್ಟಾಸ್‌(27), ನಬೀಸಾದ್‌(21) ಬಂಧಿತರು. ಆರೋಪಿಗಳ ಪೈಕಿ ಸಾಗರ್‌ ಎಚ್‌ಎಸ್‌ಆರ್‌ ಲೇಔಟ್‌ನ ಅಗರ ಸರ್ಕಾರಿ ಶಾಲೆಯ ಹಿಂಭಾಗ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್‌ ಹಾಗೂ ರೇಸಿಂಗ್‌ ಮಾಡುತ್ತಿದ್ದ. ಈತನನ್ನು ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇನ್ನು ಐಟಿಪಿಎಲ್‌ ಮುಖ್ಯರಸ್ತೆ ಮತ್ತು ಸೇಂಟ್‌ ಜಾನ್ಸ್‌ ರಸ್ತೆಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ಮೊಹಮ್ಮದ್‌ ಬಾಲಾ ಮತ್ತು ರಾಯನ್‌ ಎಂಬವರನ್ನು ಪುಲಿಕೇಶಿನಗರ ಮತ್ತು ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆ ಪೊಲೀಸರು 2 ಪ್ರತ್ಯೇಕ ಪ್ರಕರಣ ದಾಖಲಿಸಿ ಕೊಂಡು ಬಂಧಿಸಿದ್ದಾರೆ. ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ಸೈಯದ್‌ ಅಬ್ಟಾಸ್‌ ಮತ್ತು ನಬೀಸಾಬ್‌ ಎಂಬವರನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಡಿವಾಳ ಸಂಚಾರ ಪೊಲೀಸ್‌ ಠಾಣೆ ಯಲ್ಲಿ ಎರಡು ಕೇಸು ದಾಖಲಾಗಿವೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next