Advertisement
ಮೆಸ್ಕಾಂ ಇಲಾಖೆಗೆ ಹಾಗೂ ಅರಣ್ಯ ಇಲಾಖೆಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದ ಫಲವಾಗಿ ಮೆಸ್ಕಾಂ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳೀಯ ಯುವಕರ ಶ್ರಮದಾನದೊಂದಿಗೆ ಅಪಾಯಕಾರಿ ಮರಗಳನ್ನು ತೆರವು ಕಾರ್ಯಾಚರಣೆ ನಡೆಸಿದರು. ಅಪಾಯಕಾರಿ ಮರಗಳಿರುವ ಜಾಗದ ಮಾಲಕರಲ್ಲಿ ಒಬ್ಬರಾದ ಪ್ರಸಿದ್ಧ ಕಿಲ್ಲೂರು ಮನೆತನದ ಶ್ರೀಕಾಂತ್ ರಾವ್ ಮರಗಳ ವಿಲೇವಾರಿ ಕುರಿತು ಸೂಕ್ತ ಮಾರ್ಗದರ್ಶನ ನೀಡಿ ಕಟ್ಟಿಗೆಗೆ ಉಪಯೋಗ ಆಗುವಂತಹ ಎಲ್ಲ ಮರಗಳನ್ನು ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು. ಅರಣ್ಯ ಇಲಾಖೆಯ ತಾಲೂಕಿನ ಅಧಿಕಾರಿ ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಶಿವಶಂಕರ್, ಶಾಜಿ, ಸ್ಥಳದಲ್ಲಿ ಸೂಕ್ತ ಸಲಹೆ ಸೂಚನೆ ನೀಡಿದರು. Advertisement
ಎಚ್ಚೆತ್ತುಕೊಂಡ ಇಲಾಖೆ : ಅಪಾಯಕಾರಿ ಮರಗಳ ತೆರವು
03:55 AM Jul 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.