ಸುರತ್ಕಲ್: ಸುರತ್ಕಲ್ ರಾ. ಹೆದ್ದಾರಿ 66ರಲ್ಲಿ ವಾಹನ ಸಾಂದ್ರತೆ ಹೆಚ್ಚುತ್ತಿದ್ದು, ಸುರತ್ಕಲ್ ಜಂಕ್ಷನ್ ಅಪಾಯ ಕಾರಿಯಾಗಿ ಪರಿಣಮಿಸಿದೆ.
ನಿತ್ಯ ವಾಹನಗಳ ಅಪಘಾತ ಸರಮಾ ಲೆಯೆ ಸಂಭ ವಿ ಸುತ್ತಿದ್ದು, ಸುರತ್ಕಲ್ನಿಂದ ಕೂಳೂರುವರೆಗೆ ಹೆದ್ದಾರಿ 66 ಸಂಚಾರವೇ ಅಪಾಯಕಾರಿ ಎಂದು ಈವರೆಗೆ ದಾಖಲಾದ ಅಪಘಾತ, ಸಾವು ನೋವಿನ ವರದಿ ಹೇಳುತ್ತಿದೆ. ಪ್ರತೀ ಎರಡು ದಿನಕ್ಕೊಂದರಂತೆ ಸರಾಸರಿ ನಾಲ್ಕು ಅಪಘಾತ ನಡೆಯು ತ್ತಿದ್ದು, ಕೈಕಾಲು ಮುರಿತ, ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ.
ಸುರತ್ಕಲ್ ಗೋವಿಂದದಾಸ ಕಾಲೇಜಿನ ಮುಂಭಾಗದಿಂದ ಎಸ್ಎನ್ಜಿಸಿ ವರೆಗೆ ಸರ್ವಿಸ್ ರಸ್ತೆಗೆ ಕ್ರಮ ಕೈಗೊಂಡಿದ್ದರೆ, ಗುಡ್ಡೆಕೊಪ್ಲ ತಿರುವಿನಿಂದ ಉಡುಪಿ ಕಡೆ ಹೋಗುವ ಎಕ್ಸ್ಪ್ರೆಸ್ ಬಸ್ ನಿಲ್ದಾಣದ ವರೆಗೆ ಸರ್ವಿಸ್ ರಸ್ತೆಯೇ ಇಲ್ಲ. ಹೀಗಾಗಿ ಟ್ರಾಫಿಕ್ ಉಲ್ಲಂಘಿಸಿ ಓಡಾಟ ನಡೆಸುವ ವೇಳೆ ಅಪಘಾತ, ಟ್ರಾಫಿಕ್ ಇಲಾಖೆಯಿಂದ ದಂಡದ ಬರೆಯಿಂದ ಜನ ಬಸವಳಿಯುತ್ತಿದ್ದಾರೆ.
ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹೆಚ್ಚಿದ ಒತ್ತಡ
Related Articles
ಪ್ರಮುಖ ಗ್ರಾಮವಾದ ಗುಡ್ಡೆಕೊಪ್ಲದಲ್ಲಿ ಹೆಚ್ಚಾಗಿ ವಸತಿ ಬಡಾವಣೆ, ಮೀನುಗಾರಿಕೆ ಉದ್ಯಮ ನಡೆಯುತ್ತಿದೆ. ಇದರಿಂದ ವಾಹನಗಳ ಓಡಾಟವೂ ಹೆಚ್ಚಿದ್ದು, ಈಗ ಸರ್ವಿಸ್ ರಸ್ತೆ ಇಲ್ಲದೆ ಜನರು ಸುತ್ತು ಬಳಸಿ ಓಡಾಟ ನಡೆಸಬೇಕಿದೆ. ಇದರಿಂದ ಪೆಟ್ರೋಲ್, ಡೀಸೆಲ್ ನಷ್ಟದ ಜತೆಗೆ ಸಮಯವೂ ವ್ಯರ್ಥ. ಕೇವಲ 200 – 250 ಮೀಟರ್ ಸರ್ವಿಸ್ ರಸ್ತೆಯಿಲ್ಲದೆ ಈ ಸಮಸ್ಯೆ ಎದುರಾಗಿದೆ.
ಸುರತ್ಕಲ್ ಜಂಕ್ಷನ್ ಅಭಿವೃದ್ಧಿಗೆ ಇದೀಗ 5 ಕೋ.ರೂ. ಬಿಡುಗಡೆಯಾಗಿದ್ದು, ಉಡುಪಿ-ಗೋವಿಂದದಾಸ ಸರ್ವಿಸ್ ರಸ್ತೆಗೆ ಕಾಂಕ್ರೀಟ್ ಹಾಕಲು ಉದ್ದೇಶಿಸಲಾಗಿದೆ. ಇದರ ಜತೆಗೆ ಎಚ್ಎನ್ಜಿಸಿ ವಾಣಿಜ್ಯ ಸಂಕೀರ್ಣದ ಬದಿಯಿಂದ ಉಡುಪಿ ಕಡೆ ಗೆ ತೆರಳು ಎಕ್ಸ್ಪ್ರೆಸ್ ಬಸ್ ಗಳ ನಿಲ್ದಾಣದವರೆಗೆ ಸರ್ವಿಸ್ ರಸ್ತೆ ನಿರ್ಮಾಣದ ಬೇಡಿಕೆ ಮುಂದಿಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಇಲ್ಲವೇ ಹೆದ್ದಾರಿ ಇಲಾಖೆ ಇದರ ಬಗ್ಗೆ ಆದ್ಯತೆ ವಹಿಸಿ ಮಾಡಿದರೆ, ಟ್ರಾಫಿಕ್ ಉಲ್ಲಂಘನೆ ನಿಲ್ಲಿಸಬಹುದು. ಜನತೆಗೆ ಸುರಕ್ಷಿತ ಸಂಚಾರಕ್ಕೆ ಒತ್ತು ನೀಡಲು ಸಾಧ್ಯವಾಗುತ್ತದೆ.
ಜಂಕ್ಷನ್ ಅಭಿವೃದ್ದಿಗೆ 5 ಕೋ.ರೂ.: ಸುರತ್ಕಲ್ ಜಂಕ್ಷನ್ ಅಭಿವೃದ್ಧಿ ಮಾಡಲಿದ್ದೇವೆ. ಇದಕ್ಕಾಗಿ 5 ಕೋಟಿ ರೂ. ಅನುದಾನ ಇಟ್ಟಿದ್ದೇವೆ. ಸರ್ವಿಸ್ ರಸ್ತೆಗೆ ಕಾಂಕ್ರೀಟ್ ಹಾಕಿ ಸುಸಜ್ಜಿತಗೊಳಿಸಲಾಗುತ್ತದೆ. ಗುಡ್ಡೆಕೊಪ್ಲ ರಸ್ತೆ ತಿರುವು ಬದಿಯಿಂದ ಎಕ್ಸ್ಪ್ರೆಸ್ ಬಸ್ ನಿಲ್ದಾಣದವರೆಗೆ ಸರ್ವಿಸ್ ರಸ್ತೆ ಮಾಡಲು ಭೂ ಸ್ವಾಧೀನ ಸಹಿತ ಕಾನೂನಾತ್ಮಕ ಆಗಬೇಕಾದ ಕೆಲಸದ ಬಗ್ಗೆ ಸರ್ವೆ ಮಾಡಿ ವರದಿ ತಯಾರಿಸಲು ಸೂಚಿಸುತ್ತೇನೆ. -ಡಾ| ಭರತ್ ಶೆಟ್ಟಿ ವೈ., ಶಾಸಕರು
-ಲಕ್ಷ್ಮೀ ನಾರಾಯಣ ರಾವ್