Advertisement
ಕಲ್ಲಾಪು, ಕೋಟೆ, ಕಟಪಾಡಿ ಪೇಟೆ ಭಾಗದಿಂದ ಅತೀ ಹೆಚ್ಚಿನ ವಾಹನ ಸಂಚರಿಸುವ ಕಟಪಾಡಿ ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಕಲ್ಪಿಸುವ ಪ್ರಮುಖ ಒಳ ರಸ್ತೆ ಇದಾಗಿದ್ದು, ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಹಂಪ್ಸ್‌ನಿಂದಾಗಿ ಸವಾರರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು ಎಂದು ಸ್ಥಳೀಯರು ಆರೋಪಿಸಿದ್ದರು.
ಮೂಳೆ ಮುರಿತಕ್ಕೊಳಗಾಗಿದ್ದು ಮತ್ತೆ ಈ ಬಗ್ಗೆ ಗಮನ ಸೆಳೆಯುವಂತಾಗಿತ್ತು.
ಹಂಪ್ಸ್ ಇರುವಿಕೆಯ ಬಗ್ಗೆ ವಾಹನ ಸವಾರರ ಗಮನ ಸೆಳೆಯಲು
ಸೋಮವಾರ ತಡರಾತ್ರಿಯಲ್ಲಿ ಬಣ್ಣ ಬಳಿಯಲಾಗಿದ್ದು, ಆಯಕಟ್ಟಿನ ಸ್ಥಳದಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿರುತ್ತದೆ. ಈ ಬಗ್ಗೆ ನಿತ್ಯ ಸಂಚಾರಿಗಳು ಸಂತಸ ವ್ಯಕ್ತಪಡಿಸಿದ್ದು, ವಾಹನ ಸವಾರರು ಸೂಚನಾ ಫಲಕವನ್ನು ಅನುಸರಿಸಿ ಎಚ್ಚೆತ್ತು ವಾಹನ ಚಲಾಯಿಸುವಂತೆಯೂ ಆಗ್ರಹಿಸುತ್ತಿದ್ದಾರೆ.
Related Articles
ವೇಗವಾಗಿ ಬೈಕ್ ಸಹಿತ ಇತರೇ ವಾಹನಗಳು ಇಲ್ಲಿ ಅಪಾಯಕಾರಿಯಾಗಿ ಸಂಚರಿಸಿ ಅಪಘಾತವಾಗುತ್ತಿದ್ದುದನ್ನು ಗಮನಿಸಿ ಮತ್ತು ಈ ಭಾಗದಲ್ಲಿ ಅಕ್ಕಪಕ್ಕದಲ್ಲಿ ಮನೆಗಳಿದ್ದು ಅಪಘಾತವನ್ನು ತಪ್ಪಿಸಲು ವೇಗ ನಿಯಂತ್ರಣಕ್ಕಾಗಿ ಹಂಪ್ಸ್ ಅಳವಡಿಸಲಾಗಿತ್ತು. ಇದೀಗ ವಾಹನ ಸವಾರರ ಗಮನ ಸೆಳೆಯುವ ಮಾದರಿಯಲ್ಲಿ ಬಣ್ಣ, ಬಣ್ಣದ ಪಟ್ಟಿ, ಸೂಚನಾ ಫಲಕವನ್ನು ಸುರಕ್ಷತಾ ದೃಷ್ಟಿಯಿಂದ ಅಳವಡಿಸಲಾಗಿದೆ. ರಿಫ್ಲೆಕ್ಟರ್ ಲಭ್ಯವಾದ ಕೂಡಲೇ ಅಳವಡಿಸಿ ಮತ್ತಷ್ಟು ಸುರಕ್ಷತೆ ಕಲ್ಪಿಸಲು ಯತ್ನಿಸುತ್ತೇನೆ .
-ಪ್ರೇಮ್ ಕುಮಾರ್ ಕಟಪಾಡಿ, ಮಾಜಿ ಗ್ರಾ.ಪಂ. ಅಧ್ಯಕ್ಷ
Advertisement