Advertisement

Danger Dengue: ಕಳೆದ ವರ್ಷಕ್ಕಿಂತ ಡೆಂಗ್ಯೂ ಪ್ರಕರಣ ಅಧಿಕ: ಸಚಿವ ದಿನೇಶ್‌

10:58 PM Jul 15, 2024 | Team Udayavani |

ಬೆಂಗಳೂರು: ಮಹಾಮಾರಿ ಡೆಂಗ್ಯೂ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿವೆ. 2024ರ ಜ. 1ರಿಂದ ಜುಲೈ 11ರ ವರೆಗೆ ರಾಜ್ಯದಲ್ಲಿ 8,221 ಪ್ರಕರಣಗಳು ದಾಖಲಾಗಿದ್ದು, ಏಳು ಜನ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ಸೋಮವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಡಾ.ಧನಂಜಯ ಸರ್ಜಿ ಪರವಾಗಿ ಡಿ.ಎಸ್‌. ಅರುಣ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದರೆ ಉತ್ತರ ಭಾರತದಲ್ಲಿ ಇದರ ಹಾವಳಿ ಅಷ್ಟಾಗಿಲ್ಲ. ನಮ್ಮಲ್ಲೇ ಯಾಕೆ ಅಂತಾ ಗೊತ್ತಾಗುತ್ತಿಲ್ಲ ಎಂದರು.

ಶಂಕಿತ ಡೆಂಗ್ಯೂಗೆ ಬಾಲಕ ಸಾವು
ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಶಂಕಿತ ಡೆಂಗ್ಯೂಗೆ ಬಾಲಕನೊಬ್ಬ ಸೋಮವಾರ ಮೃತಪಟ್ಟಿದ್ದಾನೆ. ನಾಗರಾಜು ಮತ್ತು ಪುಷ್ಪವತಿ ದಂಪತಿ ದ್ವಿತೀಯ ಪುತ್ರ ರಾಜೇಶ್‌ (10) ಮೃತ ಬಾಲಕ.

Advertisement

Udayavani is now on Telegram. Click here to join our channel and stay updated with the latest news.

Next