Advertisement
ರೋಮಾಂಚನಕಾರಿ ಅನುಭವ ಬೆಟ್ಟ ಕಣಿವೆಗಳ ಅಂಚಿನಲ್ಲಿ ಕಡಿದಾದ ಮಾರ್ಗ ದಲ್ಲಿ ಮೂರು ಕಿ.ಮೀ.ಸಾಗಿದರೆ ದಟ್ಟವಾದ ಅರಣ್ಯ ಸಿಗುತ್ತದೆ. ಈ ಮಾರ್ಗವಾಗಿ ಚಾರಣ ಪ್ರಾರಂಭ ವಾಗಲಿದ್ದು, ಕವಳಗುಹೆ ತಲುಪಲು 2 ಮಾರ್ಗಗಳಿವೆ. ಬೆಟ್ಟದ (ಹಿಂಬದಿ) ಮೇಲಿನ ಮಾರ್ಗವಾಗಿ ತೆರಳಿದರೆ 3 ಕಿ.ಮೀ. ಕಾಲು ದಾರಿ ತುಳಿದು ಸಾಗಿದರೆ 540 ಮೆಟ್ಟಿಲುಗಳನ್ನು ಹತ್ತಬೇಕು. 2 ಮಾರ್ಗಗಳು ರೋಮಾಂಚನಕಾರಿ ಅನುಭವ ನೀಡಲಿದ್ದು, ಆಯಾಸವೆನ್ನಿಸಿ ದಾಗ ವಿರಮಿಸುವುದಕ್ಕೂ ಅವಕಾಶವಿದೆ.
ಹೀಗೆ ಕಾಲುದಾರಿಯಾಗಿ ಸಾಗಿದವ ರಿಗೆ ನಾಗಝರಿ ಹಳ್ಳ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ತಂಪಾದ ವಾತಾವರಣ ಜತೆಗೆ ಪ್ರಶಾಂತತೆಯ ಅನುಭವವನ್ನು ಬಾನೆತ್ತರಕ್ಕೆ ನಿಂತ ಗುಹೆಗಳು ನೀಡುತ್ತವೆ. ಹೀಗೆ ಕತ್ತಿಯಂತೆ ಜೋತುಬಿದ್ದ ಚೂಪಾದ ಶಿಲೆಗಳು ತಲೆಗೆ ಬಡಿಯದಂತೆ ಎಚ್ಚರಿಕೆ ಯಿಂದ 8 ಮೀಟರ್ ಒಳಗೆ ಸಾಗಿದರೆ ಬೃಹತ್ ಶಿವಲಿಂಗದ ದರ್ಶನವಾಗುತ್ತದೆ. ಗುಹೆಯೊಳಗೆ ಗೋವಿನ ಕೆಚ್ಚಲಿನಂತೆ ಜೋತು ಬಿದ್ದ ಶಿಲೆಯಿಂದ ಬಸಿಯುತ್ತಿದ್ದ ದ್ರವ್ಯ ಶಿವಲಿಂಗಕ್ಕೆ ಅಭಿಷೇಕ ಮಾಡಿದಂತೆ ಭಾಸವಾಗುವಂತಿದ್ದು, ಇದನ್ನು ಕಣ್ತುಂಬಿಸಿಕೊಂಡವರ ಮನದಲ್ಲಿ ಧನ್ಯತಾ ಅನುಭಾವ ಮೂಡುವುದು ಸುಳ್ಳಲ್ಲ. ಅನುಮತಿ ಖಡ್ಡಾಯ
ಕವಳಗುಹೆ ಚಾರಣಕ್ಕೆ ಅಲ್ಲಿನ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಚಾರಣಆರಂಭಕ್ಕೆ ಮುನ್ನ 3 ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ನಡೆಯುತ್ತದೆ. ಅಲ್ಲಿನ ಮೇಲಧಿ ಕಾರಿಗಳಿಂದ ಅನುಮತಿ ಖಾತ್ರಿ ಆದ ಅನಂತರವೇ ಚಾರಣದ ಮುಂದಿನ ಮಾರ್ಗ ತೆರವುಗೊಳ್ಳುತ್ತದೆ.