Advertisement

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

11:03 AM Oct 27, 2021 | Team Udayavani |

ದಾಂಡೇಲಿ: ತಾಲೂಕಿನ ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಅಪರಿಚಿತ ಟಿಪ್ಪರ್ ಒಂದು ಅಪಘಾತ ನಡೆಸಿದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

Advertisement

ಹಳಿಯಾಳ ಕಡೆಯಿಂದ ದಾಂಡೇಲಿಗೆ ಬರುತ್ತಿದ್ದ ಕೆಎ:65, ಎಚ್: 9679 ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಅಪರಿಚಿತ ಟಿಪ್ಪರ್ ವಾಹನವೊಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರ ನಗರದ ಸಮೀಪದ ಅಂಬೇವಾಡಿ, ಗಾವಠಾಣ ನಿವಾಸಿಯಾಗಿರುವ 45 ವರ್ಷ ವಯಸ್ಸಿನ ನಾಗು ಕೊಂಡು ಬಿಚ್ಚುಕಳೆ ಗೌಳಿಗೆ ಬಲಕಾಲಿಗೆ ಮತ್ತು ಬಲಗೈಗೆ ಗಂಭೀರ ಗಾಯವಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿದ್ದ 40 ವರ್ಷ ವಯಸ್ಸಿನ ಆತನ ಹೆಂಡತಿ ಬೊಮ್ಮಿಬಾಯಿ ನಾಗು ಬಿಚ್ಚುಕಳೆ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಪಘಾತ ನಡೆದ ಸ್ವಲ್ಪ ಹೊತ್ತಿನಲ್ಲೆ ದಾಂಡೇಲಿಗೆ ಬರುತ್ತಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ತಮ್ಮ ವಾಹನ ನಿಲ್ಲಿಸಿ, ತಕ್ಷಣದಲ್ಲೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈಯವರಿಗೆ ಕರೆ ಮಾಡಿ ಮಾಹಿತಿ ತಿಳಿಸಿ, ಪಿಎಸೈಯವರು ಸ್ಥಳಕ್ಕೆ ಬರುವವರೆಗೆ ಖುದ್ದು ಸ್ಥಳದಲ್ಲಿದ್ದು ನೆರವಾಗಿದ್ದಾರೆ. ಅಪಘಾತ ನಡೆಸಿದ ವಾಹನವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಹಳಿಯಾಳದ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದಾರೆ.

ಇದನ್ನೂ ಓದಿ : ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

ಘೋಟ್ನೇಕರ ಅವರು ಕರೆ ಮಾಡಿದ ತಕ್ಷಣದಲ್ಲೆ ಪಿಎಸೈ ಐ.ಆರ್.ಗಡ್ಡೇಕರ ಅವರು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಆಂಬುಲೆನ್ಸ್ ಹೊರಗಡೆ ಇದ್ದ ಕಾರಣ ಸಕಾಲಕ್ಕೆ ಆಂಬುಲೆನ್ಸ್ ಸಿಗದಿದ್ದಾಗ ಘೋಟ್ನೇಕರ ಅವರು ತಮ್ಮ ವಾಹನದಲ್ಲಿ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಈ ಸಂದರ್ಭದಲ್ಲಿ ಪಿಎಸೈ ಐ.ಆರ್.ಗಡ್ಡೇಕರ ಅವರು ತಮ್ಮ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಗಂಭೀರ ಗಾಯಗೊಂಡ ನಾಗು ಕೊಂಡು ಬಿಚ್ಚುಕಳೆ ಗೌಳಿಯವರನ್ನು ಧಾರವಾಡಕ್ಕೆ ರವಾನಿಸಲಾಗಿದೆ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಒಟ್ಟಿನಲ್ಲಿ ಸಕಾಲಿಕವಾಗಿ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೆಕರ ಹಾಗೂ ಪಿಎಸೈ ಐ.ಆರ್.ಗಡ್ಡೇಕರ ಅವರ ಸಾಮಾಜಿಕ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next