Advertisement

ವಿಸರ್ಜನೆಗೆ ಬರಲೊಪ್ಪದ ಗಣಪ! ಬೈಲುಪಾರ್ ನಲ್ಲೊಂದು ವಿಚಿತ್ರ ಘಟನೆ

07:02 PM Sep 22, 2021 | Team Udayavani |

ದಾಂಡೇಲಿ : ಹಿಂದು ಧರ್ಮಿಯರ ಅತ್ಯಂತ ಇಷ್ಟದ ಹಬ್ಬಗಳಲ್ಲಿ ದೊಡ್ಡ ಹೊಟ್ಟೆಯ ಗಣಪನ ಹಬ್ಬವು ಅತ್ಯಂತ ಪ್ರಮುಖವಾಗಿದೆ. ಇಡೀ ಊರಿಗೆ ಊರೇ ಸಂಭ್ರಮಿಸುವ ಗಣಪನ ಹಬ್ಬವಾದ ಚೌತಿ ಹಬ್ಬದ ನಿಮಿತ್ತ ಪ್ರತಿಷ್ಟಾಪಿಸಿ, ಆರಾಧಿಸಿ, ಪೂಜಿಸಿಕೊಂಡ ಗಣಪ 5ನೇ ದಿನ, 7ನೇ ದಿನ, 9ನೇ ದಿನ ಮತ್ತು 11ನೇ ದಿನ ವಿಸರ್ಜನೆಗೆ ಬರಲೊಪ್ಪದೇ ವರ್ಷ ಪೂರ್ತಿ ಪೂಜಿಸಲು ಕುಳಿತಿರುವ ಘಟನೆ ನಗರದ ಬೈಲುಪಾರಿನಲ್ಲಿ ನಡೆದಿದೆ.

Advertisement

ಅಂದ ಹಾಗೆ ನಗರದ  ಬೈಲುಪಾರ್ ನ ನಾಗವ್ವಾ, ಶಂಕ್ರಪ್ಪ ಚಲವಾದಿಯವರ ಮನೆಯಲ್ಲಿ ಅವರ ಮಕ್ಕಳಾದ ಸುರೇಶ ಹಾಗೂ ರಾಜ್ ಕುಮಾರ್ ಚಲವಾದಿಯವರು ಚೌತಿ ಹಬ್ಬದ ದಿನ ಮಣ್ಣಿನ ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದರು. ವಿಶೇಷ ಪೂಜೆ ಹಾಗೂ ಭಜನೆಯ ಮೂಲಕ ಗಣೇಶನನ್ನು ಆರಾಧಿಸಿ ಪ್ರತಿವರ್ಷದಂತೆ ಈ ಬಾರಿಯೂ ಐದನೇ ದಿನಕ್ಕೆ ವಿಸರ್ಜನೆ ಮಾಡಲು ಸಿದ್ದತೆ ನಡೆಸಿ, ವಿಸರ್ಜನೆಗೆ ಗಣೇಶ ಮೂರ್ತಿಯನ್ನು ಎಬ್ಬಿಸಲು ಹೋಗಿದ್ದರು. ಆಗ ವಿಸರ್ಜನೆಗೆ ಗಣೇಶ ಒಪ್ಪಲಿಲ್ಲವಂತೆ. ಆದರೆ ನಿನ್ನನ್ನು ಇಲ್ಲೆ ಇಟ್ಟು ಪೂಜೆ ಮಾಡುತ್ತೇನೆಂದು ಕೇಳಿಕೊಂಡು ಎಬ್ಬಿಸಲು ಪ್ರಯತ್ನಿಸಿದಾಗ ಗಣೇಶನ ಮೂರ್ತಿ ಏಳಲಾರಂಭಿಸಿದೆ. ಹೀಗೆಯೆ 7ನೇ ದಿನ, 9ನೇ ದಿನ ಮತ್ತು 11ನೇ ದಿನವು ಇದೇ ರೀತಿಯಾಯಿತಂತೆ. ಕೊನೆಗೆ ಅಂಬೇವಾಡಿಯ ಗಣಪತಿ ದೇವಸ್ಥಾನದ ಪುರೋಹಿತರಲ್ಲಿ ಆದ ಘಟನೆಯನ್ನು ವಿವರಿಸಿದಾಗ, ಅವರು ಮುಂದಿನ ಚೌತಿ ಹಬ್ಬದವರೆಗೆ ವಿಸರ್ಜನೆ ಮಾಡದೆ, ಅಲ್ಲಿಯವರೆಗೆ ಪೂಜೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅವರು ಹೇಳಿದಂತೆಯೇ ಮುಂದಿನ ವರ್ಷದ ಚೌತಿಯವರೆಗೆ ಪೂಜೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ ಗಣೇಶನನ್ನು ಪ್ರತಿಷ್ಟಾಪಿಸಿರುವ ಸುರೇಶ ಶಂಕ್ರಪ್ಪ ಚಲವಾದಿಯವರು.

ಇದನ್ನೂ ಓದಿ:ಕಾರವಾರ:  ಪ್ರವಾಸೋದ್ಯಮ, ಜಲಸಾಹಸ ಕ್ರೀಡೆಗೆ ಸರ್ಕಾರದ ಅನುಮತಿ

ಒಟ್ಟಿನಲ್ಲಿ ವಿಸರ್ಜನೆಗೆ ಬರಲೊಪ್ಪದ ಇಲ್ಲಿಯ ಗಣೇಶ ನಗರದಲ್ಲಿ ಬಹು ಸುದ್ದಿಯಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಗಣೇಶನ ದರ್ಶನಕ್ಕಾಗಿ ಆಗಮಿಸತೊಡಗಿದ್ದಾರೆ. ನಾವೂ ಕೂಡಾ  ಒಮ್ಮೆ ಗಣೇಶನನ್ನು ಎಬ್ಬಿಸಿ ನೋಡಬಹುದೇ ಎಂದು ಕೇಳಿದಾಗ, ಈಗ ಎಬ್ಬಿಸಬಾರದು. ಮುಂದಿನ ವರ್ಷದವರೆಗೆ ಎಬ್ಬಿಸುವ ಹಾಗಿಲ್ಲ ಎಂದು ಮನೆ ಮಂದಿ ತಿಳಿಸಿದ್ದಾರೆ. ಚರ್ಚೆಗೆ ಗ್ರಾಸವಾದ  ಹಾಗೂ ಕುತೂಹಲಕ್ಕೆ ಕಾರಣವಾದ ಶ್ರೀ.ಗಣೇಶನ ಈ ಮಹಿಮೆಯ ಬಗ್ಗೆ ಧಾರ್ಮಿಕ ಪಂಡಿತರೆ ಪರಿಶೀಲನೆ ನಡೆಸಿ, ಸೂಕ್ತ ಅಭಿಪ್ರಾಯಕ್ಕೆ ಬರಬೇಕಾಗಿದೆ.

ಮುಂದಿನ ವರ್ಷದವರೆಗೆ ಪೂಜೆ ಮಾಡುತ್ತೇವೆ:ಮೊದಲೆ ನಾವು ಬಡವರು. ಪ್ರತಿದಿನ ಪೂಜೆ ಮಾಡುವುದು ಸುಲಭದ ಮಾತಲ್ಲ. ಆದರೂ ಮುಂದಿನ ಚೌತಿಯವರೆಗೆ ಪೂಜೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಾಗವ್ವಾ ಶಂಕ್ರಪಪ್ಪ ಚಲವಾದಿ ಹಾಗೂ ಅವರ ಮಕ್ಕಳಾದ ಸುರೇಶ ಮತ್ತು ರಾಜ್ ಕುಮಾರ್ ಅವರುಗಳು ಪತ್ರಿಕೆಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next