Advertisement

Dandeli: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರನಿಗೆ ಗಾಯ

08:42 PM Sep 12, 2023 | Team Udayavani |

ದಾಂಡೇಲಿ : ನಗರದ ಮಾರುತಿನಗರದಲ್ಲಿ ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಸವಾರೋರ್ವನಿಗೆ ಗಾಯವಾದ ಘಟನೆ ಮಂಗಳವಾರ ನಡೆದಿದೆ.

Advertisement

ನಗರದ ಮಾರುತಿ ನಗರದ ನಿವಾಸಿ ಮಹಮ್ಮದ್ ಗೌಸ್ ಯರಗಟ್ಟಿ ಎಂಬವರು ದ್ವಿಚಕ್ರ ವಾಹನದಲ್ಲಿ ಮಾರ್ಕೆಟಿಗೆಂದು ಹೋಗುತ್ತಿದ್ದಾಗ ಎದುರುಗಡೆಯಿಂದ ಅತೀ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಹಮ್ಮದ್ ಗೌಸ್ ಯರಗಟ್ಟಿಯವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಮಹಮ್ಮದ್ ಗೌಸ್ ಯರಗಟ್ಟಿಯವರ ಕಾಲಿಗೆ ಮತ್ತು ತಲೆಗೆ ಗಾಯವಾಗಿದೆ.

ಗಾಯಗೊಂಡ ಮಹಮ್ಮದ್ ಗೌಸ್ ಯರಗಟ್ಟಿಯವರನ್ನು ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿದೆ. ಡಿಕ್ಕಿಗೊಳಿಸಿದ ದ್ವಿಚಕ್ರ ವಾಹನ ಸವಾರನು ಕುಡಿದ ಮತ್ತಿನಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದನು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next