Advertisement

ದಾಂಡೇಲಿ: ದುಡಿದು ದುಡಿದು ಸುಸ್ತಾದ ಸಾರ್ವಜನಿಕ ಆಸ್ಪತ್ರೆಯ ಮುದಿ ವಯಸ್ಸಿನ ಜೀಪು

01:22 PM Jan 04, 2022 | Team Udayavani |

ದಾಂಡೇಲಿ: ನಗರದ ಮಟ್ಟಿಗೆ ಸಾರ್ವಜನಿಕ ಆಸ್ಪತ್ರೆಯ ವಿಚಾರಕ್ಕೆ ಬಂದರೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಓಡಾಡುವ ವಾಹನ. ಹೆಚ್ಚು ಕಮ್ಮಿ ಅಂಬುಲೆನ್ಸಿಗಾದರೂ ಸ್ವಲ್ಪ ವಿರಾಮ ಸಿಗಬಹುದು, ಆದರೆ ಈ ವಾಹನಕ್ಕೆ ವಿರಾಮ ಎಂಬುವುದೆ ಇಲ್ಲ. ಒಟ್ಟಿನಲ್ಲಿ 24X7 ಸೇವೆಯಲ್ಲಿ ನಿರತವಾಗಿರುವ ವಾಹನವೆ ಈ ಜೀಪು. ನೂರೆಂಟು ಸಮಸ್ಯೆಗಳನ್ನು ಹೊಂದಿರುವ ಈ ವಾಹನಕ್ಕೀಗ 25 ರ ಮುದಿ ವಯಸ್ಸು. ವಯಸ್ಸು ಹೆಚ್ಚಿದರೂ ಆಯಾಸ ಪಡದೇ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಿದೆ. ನಿರಂತರವಾಗಿ ಆರೋಗ್ಯ ಸೇವೆಗೈಯುವ ಜೀಪಿಗೆ ವಿಶ್ರಾಂತಿಯನ್ನು ನೀಡುವ ಕಾಲ ಸನ್ನಿಹಿತವಾಗಿದೆ.

Advertisement

ಹೌದೌದು, ಕೊರೊನಾ ಸಮಯದಲ್ಲಿ ಅಂಬುಲೆನ್ಸ್ ಬೇಕು ಎಂಬ ಒತ್ತಾಯ ನಡೆದಿತ್ತು. ಒತ್ತಾಯಕ್ಕೆ ಅನುಗುಣವಾಗಿ ಎರಡೆರಡು ಅಂಬುಲೆನ್ಸ್ ಬಂದಿದೆ. ಸದ್ದಿಲ್ಲದೇ ತನ್ನ ಪಾಡಿಗೆ ಕೆಲಸ ಮಾಡುವ ಈ ಜೀಪು ಕರೆದಲ್ಲಿಗೆ ಹೋದರೂ, ಮುದಿ ವಯಸ್ಸಿನ ಜೀಪು ಎಂಬುವುದು ಬಹಳಷ್ಟು ಜನರಿಗೆ ಗೊತಿರಲಿಕ್ಕಿಲ್ಲ. ನಗರ ಹಾಗೂ ನಗರದ ಸುತ್ತಮುತ್ತಲು ಕೋವಿಡ್ ಲಸಿಕೆ ವಿತರಣೆ, ಲಸಿಕೆ ವಿತರಣೆಯ ಸಿಬ್ಬಂದಿಗಳಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಿಡುವಂತಹ ಕಾರ್ಯವನ್ನು ಮಾಡುವುದು ಇದೇ ಜೀಪು.

ಹಾಗೆ ನೋಡಿದರೇ ಸರಕಾರವೆ ಹಳೆ ವಾಹನವನ್ನು ಉಪಯೋಗಿಸುವಂತಿಲ್ಲ ಎಂದು ಹೇಳುತ್ತದೆ. ಇಲ್ಲಿ ಅದೇ ಸರಕಾರದ ಸಾರ್ವಜನಿಕ ಆಸ್ಪತ್ರೆಯ ಜೀಪು ಮಾತ್ರ 25 ವರ್ಷ ದಾಟಿ 26 ನೇ ವರ್ಷದಲ್ಲಿದೆ. ಹಳೆಯದಾದ ಈ ಜೀಪನ್ನು ಬದಲಾಯಿಸಬೇಕಾಗಿದೆ. ಕೋವಿಡ್ ನಿಯಂತ್ರಣಕ್ಕೆ ಈ ಜೀಪಿನ ಅವಶ್ಯಕತೆ ಬಹಳಷ್ಟು ಇರುವುದರಿಂದ ತ್ವರಿತಗತಿಯಲ್ಲಿ ಹೊಸ ಜೀಪನ್ನು ಸಾರ್ವಜನಿಕ ಆಸ್ಪತ್ರೆಗೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಜಿಲ್ಲೆ ಕಂಡ ಅತ್ಯಂತ ಉತ್ಸಾಹಿ ಮತ್ತು ದಕ್ಷ ಜಿಲ್ಲಾ ವೈದ್ಯಾಧಿಕಾರಿಕಾರಿಯಾಗಿರುವ ಡಾ.ಶರದ್ ನಾಯಕ ಅವರು ಶರವೇಗದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಹೊಸ ಜೀಪನ್ನು ಒದಗಿಸಿಕೊಡಲಿದ್ದಾರೆಂಬ ವಿಶ್ವಾಸ ನಗರದ ಜನತೆಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next