Advertisement

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

01:14 PM Sep 19, 2021 | Team Udayavani |

ದಾಂಡೇಲಿ : ಗಣೇಶನನ್ನು ಹೀಗೂ ಆರಾಧಿಸಬಹುದಲ್ವೆ ಎಂದೆನಿಸುತ್ತೆ ಇಲ್ಲಿಯ ಗಣಪತಿ ಆರಾಧನೆ. ಗಣೇಶನ ಆರಾಧನೆಯ ಜೊತೆಗೆ ಬಾಲಗಂಗಾಧರ ತಿಲಕರ ಆಶಯದಂತೆ ಜನಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ, ದಾಂಡೇಲಿಯ ಮಾರುತಿ ನಗರದ ನಿವಾಸಿಗಳಾದ ಅಶ್ವಿನಿ ಬಸವರಾಜ ಡಗ್ಗೆನ್ನವರ ಅವರ ಕುಟುಂಬ.

Advertisement

ಸದಾ ಕ್ರೀಯಾಶೀಲ ಕಾರ್ಯಚಟುವಟಿಕೆಯ ಮೂಲಕ ಗಮನ ಸೆಳೆದಿರುವ ಅಶ್ವಿನಿಯವರು ಈ ಬಾರಿ ಅವರ ಪತಿ ಬಸವರಾಜ ಹಾಗೂ ಮನೆ ಮಂದಿಯ ಸಹಕಾರದಲ್ಲಿ ಗಣೇಶನ ಆರಾಧನೆಯ ಜೊತೆಗೆ ಕೊರೊನಾದ ಬಗ್ಗೆ ಹಾಗೂ ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದ ವಿಭಿನ್ನ ಪ್ರಯತ್ನವನ್ನು ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ :ಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ

ಅವರ ಈ ಜಾಗೃತಿಯ ಕಾರ್ಯವನ್ನು ನೋಡಲು ಸಾರ್ವಜನಿಕರೂ ಅಶ್ವಿನಿಯವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಹನ್ನೊಂದು ದಿನಗಳವರೆಗೆ ಆಚರಿಸಲ್ಪಡುವ ಗಣೇಶನನ್ನು ಭಾನುವಾರ ವಿಸರ್ಜನೆ ಮಾಡಲಿದ್ದಾರೆ. ಒಟ್ಟಿನಲ್ಲಿ ಕೊರೊನಾ ಮತ್ತು ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿಯ ವೈಭವನ್ನೊಮ್ಮೆ ನೋಡ ಬನ್ನಿ ಎಂಬಂತಿದೆ ಈ ದೃಶ್ಯ.

Advertisement

Udayavani is now on Telegram. Click here to join our channel and stay updated with the latest news.

Next