Advertisement

Dandeli: ಕುಡಿದ ನಶೆಯಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ; ಓರ್ವನಿಗೆ ಗಾಯ

05:49 PM Oct 27, 2024 | Team Udayavani |

ದಾಂಡೇಲಿ: ಕುಡಿದ ನಶೆಯಲ್ಲಿ ಮಾತಿಗೆ ಮಾತು ಬೆಳೆದು ಸೋಡಾ ಬಾಟಲಿಯಿಂದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಜೆ.ಎನ್ ರಸ್ತೆಯಲ್ಲಿ ಭಾನುವಾರ (ಅ.27) ನಡೆದಿದೆ.

Advertisement

ಗಾಂಧಿನಗರದ ನಿವಾಸಿ ಮಂಜುನಾಥ ಕೀಲಿಕ್ಯಾತ ಹಲ್ಲೆಗೊಳಗಾದ ವ್ಯಕ್ತಿ. ಸ್ಥಳೀಯ ಗಾಂಧಿನಗರದ ನಿವಾಸಿ ಸಮೀರ್ ಎಂಬಾತನು ಹಲ್ಲೆ ಮಾಡಿದ್ದಾನೆ. ಇವರಿಬ್ಬರು ಕುಡಿದ ನಶೆಯಲ್ಲಿ ಜಗಳ ಮಾಡಿಕೊಂಡಿದ್ದಾರೆ.

ಮಾತಿಗೆ ಮಾತು ಬೆಳೆದು ಸಮೀರ್ ಎಂಬಾತನು ಸೋಡಾ ಬಾಟಲಿಯಿಂದ ಮಂಜುನಾಥ ಕೀಲಿಕ್ಯಾತನ ತಲೆಗೆ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಮಂಜುನಾಥ ಕೀಲಿಕ್ಯಾತನ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next