Advertisement
ಟಾಮ್ ಆ್ಯಂಡ್ ಜೆರ್ರಿ, ಮಿಕ್ಕಿ ಮೌಸ್, ಡೋರೆಮನ್, ಕಾಂಗಾ, ಎಂವೆಜರ್, ಪಾಪೆಯೆ, ಮಿಚಿಗನ್, ಶ್ರೇಕ್, ಆ್ಯಂಗ್ರಿ ಬರ್ಡ್ಸ್,ಛೋಟಾ ಭೀಮ್, ಅಲಾದಿನ್, ಜಂಗಲ್ ಬುಕ್‌ನ ಮೊಗ್ಲಿ, ಸ್ಕಿಪ್ಪಿ ಸೆರಲ್, ಚಿಪ್ ಆ್ಯಂಡ್ ಡೆಲ್, ಮೋಟು ಪೊತ್ಲು, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಹೀಗೆ ಟಿ.ವಿ. ಯಲ್ಲಿ ಬರುವ ಮಕ್ಕಳ ಕಾರ್ಟೂನ್ ಲೋಕದ ಪಾತ್ರಗಳು ಕಣ್ಣೆದುರು ಬಂದರೆ ಹೇಗೆ? ಹೌದು, ಇವರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ನೋಡುವಂಥ ಅವಕಾಶ ಇಲ್ಲಿದೆ. ಇದೊಂದು ಸುಂದರವಾದ ಮಾಯಾಬಜಾರ್. ಇಲ್ಲಿ ಎಲ್ಲವೂ ಮನಮೋಹಕ. ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದ ತಂದೆ-ತಾಯಿಗೆ, ಮಕ್ಕಳೇ ಶಿಕ್ಷಕರು.
Related Articles
Advertisement
ದಾಂಡೇಲಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಮನೋರಂಜನೆಗಾಗಿ ಜಿಮ್ನಾಶಿಯಂ, ಮಲ್ಟಿ ಪ್ಲೇ ಮಾಡಲಾಗಿದೆ. ದಂಡಕಾರಣ್ಯದ ಒಳಗಿರುವ ಯಾವುದೇ ಒಂದು ಮರವನ್ನೂ ಕಡಿಯದೆ. ಆಲಂಕಾರಿಕ ಹೂವು ಮತ್ತು ಹಣ್ಣಿನ ಗಿಡಗಳನ್ನೂ ಅಲ್ಲಿ ನೆಟ್ಟು ನೈಸರ್ಗಿಕ ಸನ್ನಿವೇಶದಲ್ಲೇ ಕಾರ್ಟೂನ್ ಶಿಲ್ಪಗಳನ್ನು ನಿರ್ಮಿಸಲಾಗಿದೆ.
ಕಲಾವಿದರಿಗೆ ಪ್ರತಿ ಶನಿವಾರ ಮತ್ತು ರವಿವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಪ್ರತಿಭಾನ್ವೇಷಣೆ ಕಾರ್ಯವನ್ನೂ ನಡೆಸಲಾಗುತ್ತದೆ. ಈ ಕಾರ್ಟೂನ್ ಲೋಕ ಎಲ್ಲರಿಗೂ ಪರಿಸರದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಲೇ ಪರಿಸರ ರಕ್ಷಣೆಯ ಮನೋಭಾವದ ಬೀಜ ಬಿತ್ತುವುದು ಅತ್ಯಂತ ಮಹತ್ವದ ವಿಷಯ. ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿಗೆ ಪ್ಯಾರಾಗೋಲ ಮಾಹಿತಿ ಕೇಂದ್ರವನ್ನು ನಿರ್ಮಿಸಲಾಗಿದೆ. ದಾಂಡೇಲಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದರೆ ಈ ಕಾರ್ಟೂನ್ ಪಾರ್ಕ್‌ಗೆ ಬಂದು ಹೋಗಿ.
ಇತರ ಪ್ರವಾಸಿ ತಾಣಗಳುದಾಂಡೇಲಿ ಕಡೆ ಪ್ರವಾಸ ಬೆಳೆಸಿದರೆ ನೋಡಲು ಸುಂದರವಾರ ತಾಣಗಳು ಬಹಳಷ್ಟಿವೆ. ಅವುಗಳಲಿ ಪ್ರಮುಖವಾಗಿ ಕಾಳಿ ನದಿ, ಸಿಂಥೆರಿ ರಾಕ್, ಸೂಪ ಡ್ಯಾಮ್, ಅಂಶಿ ರಾಷ್ಟ್ರೀಯ ಉದ್ಯಾನವನ, ಸೈಕ್ಸ್ ಪಾಯಿಂಟ್, ಕವಳ ಗುಹೆ, ಕುಲ್ಗಿ ನೇಚರ್ ಕ್ಯಾಂಪ್ ಆಕರ್ಷಣೀಯ ಸ್ಥಳಗಳು. •ಟಿ.ಶಿವಕುಮಾರ್