Advertisement
ಘಟನೆಯ ವಿವರ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ವೀರಭದ್ರೇಶ್ವರ ಕೃಷಿ ಕೇಂದ್ರದ ಹತ್ತಿರದ ನಿವಾಸಿ 29 ವರ್ಷ ವಯಸ್ಸಿನ ಗೀತಾ ಇವರು ಅನ್ಯಜಾತಿಯ ಅರ್ಜುನ ಗೌಡಾ ಹೊನ್ನಾಗೌಡ್ರು ಈತನನ್ನು 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು. ಸೆ:16 ರಂದು ಅರ್ಜುನ ಗೌಡಾ ತನ್ನ ಸಂಬಂಧಿಗಳಾದ ಧಾರವಾಡ ಜಿಲ್ಲೆಯ ಅರಳಿಕಟ್ಟೆ ನಿವಾಸಿ ಬಸವರಾಜ ಗದಿಗೆಪ್ಪಾ ಹೊಸಮನಿ, ಶಿಗ್ಗಾವಿಯ ಮಾರ್ಕೆಟ್ ರಸ್ತೆ ನಿವಾಸಿ ರವಿ ಅಶೋಕ ಬುಳಕ್ಕನವರ, ಶಿಗ್ಗಾವಿ ತಾಲೂಕಿನ ಹಿತ್ಲಮನಿ ನಿವಾಸಿ ಮಂಜುನಾಥ ಬಸವಣ್ಣೆಪ್ಪಾ ಹಿತ್ತಲಮನಿ ಇವರಲ್ಲಿ ತನ್ನ ಹೆಂಡತಿ ಗೀತಾಳನ್ನು ಕೊಲೆ ಮಾಡಿ ಶವವನ್ನು ಬೇರೆ ಕಡೆಗೆ ಹಾಕಿ ಬರಲು ತಿಳಿಸಿದ್ದಾನೆ, ಅದರಂತೆ ಈ ಮೂವರು ಗೀತಾ ಅರವರಿಗೆ ಕರೆ ಮಾಡಿ ಸೆ:16 ರಂದು ಸಂಜೆ 7 ಗಂಟೆಗೆ ಶಿಗ್ಗಾವಿ ಪಟ್ಟಣದ ಹೊರ ವಲಯಕ್ಕೆ ಬರುವಂತೆ ತಿಳಿಸಿದ್ದಾರೆ. ಅದರಂತೆ ಗೀತಾ ಅಲ್ಲಿಗೆ ಬಂದಿದ್ದಾರೆ ಈ ವೇಳೆ ಅವರ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಕಾರಿನ ಜಾಕ್ ಲಿವರ್ ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿ ಬಳಿಕ ಕೆ.ಎ-27, ಎನ್:5562 ಸಂಖ್ಯೆಯ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಶಿಗ್ಗಾವಿಯಿಂದ ಮುಂಡಗೋಡ, ಕಲಘಟಗಿ ಮಾರ್ಗವಾಗಿ ಬಂದು ದಾಂಡೇಲಿಯ ಕರ್ಕಾ ಹಳ್ಳದ ಸೇತುವೆಯ ಮೇಲಿಂದ ಕೆಳಗೆ ಎಸೆದು ಹೋಗಿದ್ದರು.
Related Articles
Advertisement
ಕ್ಷೀಪ್ರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪೊಲೀಸ್ ವರಿಷ್ಠಧಿಕಾರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಗಂಭೀರ ಗಾಯಗೊಂಡು, ಕಾರಿನ ಡಿಕ್ಕಿಯಲ್ಲಿ ಬಹಳಷ್ಟು ಹೊತ್ತು ಇದ್ದು, ಆನಂತರದಲ್ಲಿ ಸರಿ ಸುಮಾರು 40 ಅಡಿ ಆಳಕ್ಕೆ ಎಸೆದಿದ್ದರೂ ಗೀತಾರವರು ಬದುಕುಳಿದಿದ್ದೇ ಪವಾಡವಾಗಿದೆ. ಸಹಕರಿಸಿದ ಸಾರ್ವಜನಿಕರು ಮತ್ತು ತಡವರಿಯದೇ ಸ್ಪಂದಿಸಿದ ದಾಂಡೇಲಿ ಗ್ರಾಮೀಣ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.