Advertisement

Dandeli: ಬಾಂಬೆಚಾಳದಲ್ಲಿ ಬಾಲಕನ ಮೇಲೆ ಬೀದಿನಾಯಿಗಳಿಂದ ದಾಳಿ; ಗಾಯ

07:12 PM Oct 20, 2024 | Team Udayavani |

ದಾಂಡೇಲಿ: ನಗರದ ಬಾಂಬೆಚಾಳದಲ್ಲಿ ಬಾಲಕನೋರ್ವನ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಘಟನೆ ಭಾನುವಾರ (ಅ.20) ಸಂಜೆ ನಡೆದಿದೆ.

Advertisement

ಸ್ಥಳೀಯ ಬಾಂಬೆಚಾಳದ ನಿವಾಸಿಯಾಗಿರುವ ಹಸನ್ ರಾಜ್ ಎಂಬತ ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ.

ಸ್ಥಳೀಯರು ನಾಯಿಗಳನ್ನು ಓಡಿಸಿದ್ದು, ಕೂಡಲೇ ಗಾಯಗೊಂಡ ಬಾಲಕನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಜನರ ಮೇಲೆ ಅನೇಕ ಬಾರಿ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next