Advertisement

ದಾಂಡೇಲಿ: ನಿಷೇಧಿತ ಪ್ರದೇಶದಲ್ಲಿ ಗುಟ್ಕಾ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

11:27 AM Oct 31, 2021 | Team Udayavani |

ದಾಂಡೇಲಿ: ದಾಂಡೇಲಿ ನಗರದ ಶಾಲಾ / ಕಾಲೇಜುಗಳು ಮತ್ತು ಮಾರುಕಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಗುಟ್ಕಾ, ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ, ನಗರಸಭೆಯ ಆರೋಗ್ಯ ನಿರೀಕ್ಷಕ ಮತ್ತು ಪೊಲೀಸ್ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.

Advertisement

ದಾಳಿಯ ಸಂದರ್ಭದಲ್ಲಿ 19 ಅಂಗಡಿಗಳಲ್ಲಿ ಗುಟ್ಕಾ, ತಂಬಾಕು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಸ್ಥಳದಲ್ಲೇ ದಂಡ ವಿಧಿಸಿ, ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಅಪ್ಪುಗೆ ಅಭಿಮಾನಿಗಳ ಅಶ್ರುತರ್ಪಣ

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ತಾಲೂಕು ವೈದ್ಯಾಧಿಕಾರಿ ಡಾ.ಭೀಮಣ್ಣ ಶಿನ್ನೂರು, ನಗರ ಸಭೆಯ ಆರೋಗ್ಯ ನಿರೀಕ್ಷಕ, ತಹಶೀಲ್ದಾರ್ ಕಚೇರಿಯ ಗೋಪಿ ಚೌವ್ಹಾಣ್, ಆರೋಗ್ಯ ಇಲಾಖೆಯ ಚನ್ನಬಸಪ್ಪ, ನಾಗರಾಜ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next