Advertisement

Dandeli: ವಸತಿ ಗ್ರಹದಲ್ಲೇ ನೇಣಿಗೆ ಶರಣಾದ ಕಾಗದ ಕಾರ್ಖಾನೆಯ ಕಾರ್ಮಿಕ

06:06 PM May 24, 2023 | Team Udayavani |

ದಾಂಡೇಲಿ: ನಗರದ ಬಂಗೂರನಗರದ ಹಳೆ ಡಿ.ಆರ್.ಟಿಯಲ್ಲಿ ಕಾಗದ ಕಾರ್ಖಾನೆಯ ಕಾರ್ಮಿಕರೊಬ್ಬರು ನೇಣಿಗೆ ಶರಣಾದ ಘಟನೆ ಬುಧವಾರ ನಡೆದಿದೆ.

Advertisement

ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪೇಪರ್ ಮೇಷಿನ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಕಾರ್ಮಿಕ 54 ವರ್ಷ ವಯಸ್ಸಿನ ದಯಾನಂದ ಕೊಟ್ಟಾರಕರ ಎಂಬವರೇ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾರೆ.

ನಿನ್ನೆ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಬಂದಿದ್ದ ದಯಾನಂದ ಕೊಟ್ಟಾರಕರ ಅವರು ಇಂದು ಬಂಗೂರನಗರದ ಹಳೆ ಡಿ.ಆರ್.ಟಿ ಬ್ಲಾಕ್ ನಂ:22 ರಲ್ಲಿರುವ ಕಾಗದ ಕಾರ್ಖಾನೆಯ ತನ್ನ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ದಾಂಡೇಲಿ ನಗರ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಶವಗಾರದಲ್ಲಿ ಇರಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next