Advertisement
“ವೈಷ್ಣವ ಜನತೋ ತೇನೆ ಕಹಿಯೆ’ ಗಾಂಧಿ ಸ್ಮತಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಕಾವ್ಯಶ್ರೀ ಅಜೇರು “ಕುಡುಮದೊಡೆಯ ಮಂಜುನಾಥ’ ಮತ್ತು “ಪದ್ಮವಿಭೂಷಣ ಧರ್ಮಚಕ್ರವರ್ತಿ ವೀರೇಂದ್ರ ಹೆಗ್ಗಡೆ’ ಗಾಯನದೊಂದಿಗೆ ಮುಂದುವರಿಸಿ “ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ’ ಯಕ್ಷ ಗಾಯನದೊಂದಿಗೆ 20 ನಿಮಿಷಗಳ ವಿಶಿಷ್ಟ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ಅವರ ಮಧುರ ಕಂಠ ಸಿರಿಗೆ ಪೂರಕವಾಗಿ ಹಿಮ್ಮೇಳದ ಚೆಂಡೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಮದ್ದಳೆಯಲ್ಲಿ ಜನಾರ್ದನ ತೋಳ್ಪಾಡಿತ್ತಾಯ, ಪುರುಷ ಪಾತ್ರದಲ್ಲಿ ಶ್ರೀಶಕುಮಾರ್ ಹೆಗ್ಡೆ ಹಾಗೂ ಸ್ತ್ರೀ ಪಾತ್ರಗಳಲ್ಲಿ ದಿವ್ಯಶ್ರೀ ಮತ್ತು ಸ್ವಾತಿ ಸಹಕರಿಸಿದ್ದರು. ಯಕ್ಷಗುರು ಅರುಣ ಕುಮಾರ್ ಧರ್ಮಸ್ಥಳ ನಿರ್ದೇಶಿಸಿ ಕಾರ್ಯಕ್ರಮ ಸಂಯೋಜಿಸಿದ್ದರು. ಕುಂಚ-ಯಕ್ಷಗಾನ-ನೃತ್ಯ ಒಂದಕ್ಕೊಂದು ಎರಕಹೊಯ್ದಂತೆ ಓತಪ್ರೋತವಾಗಿ ಹರಿದು ಬಂದು ಕುತೂಹಲ, ಆಕರ್ಷಣೆಗೆ ಒಳಗಾಗಿತ್ತು. ನಟ ಮುಖ್ಯಮಂತ್ರಿ ಚಂದ್ರು ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ| ಹೆಗ್ಗಡೆಯವರು ಕಲಾವಿದರ ಪ್ರತಿಭೆಯನ್ನು ಮುಕ್ತಕಂಠದಿಂದ ಅಭಿನಂದಿಸಿದರು.
Advertisement
ಕುಂಚ-ಗಾನ-ನೃತ್ಯ ವೈಭವ
05:38 PM May 30, 2019 | mahesh |
Advertisement
Udayavani is now on Telegram. Click here to join our channel and stay updated with the latest news.