Advertisement

ಕೊಪ್ಪಳ: ಮನೆಗಳಿಗೆ ನುಗ್ಗಿದ ಹಿರೇಹಳ್ಳದ ನೀರು

09:59 AM Oct 02, 2022 | Team Udayavani |

ಕೊಪ್ಪಳ: ತಾಲೂಕಿನ ಕಿನ್ನಾಳ ಮಿನಿ ಡ್ಯಾಂನಿಂದ ನೀರು ಹಳ್ಳದ ಪಾತ್ರಕ್ಕೆ ಹರಿಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಹಳೇ ಗೊಂಡಬಾಳದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

Advertisement

ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ.

ಇದನ್ನೂ ಓದಿ:ಆಗಸ್ಟ್‌ ಒಂದೇ ತಿಂಗಳಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ತಾಲೂಕಿನ ಕಿನ್ನಾಳ ಡ್ಯಾಂನಿಂದ ಹೆಚ್ಚುವರಿ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಹಳೇ ಗೊಂಡಬಾಳ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ರೈತರು ಜಾನುವಾರುಗಳಿಗೆ ಸಂಗ್ರಹಿಸಿಟ್ಡಿದ್ದ ಮೇವಿನ ಬಣವೆ ನೀರಿನಲ್ಲಿ ಜಲಾವೃತವಾಗಿವೆ. ನೀರಿಗೆ ಮೇವು ನೆನೆದಿದೆ. ಅಂಗನವಾಡಿ ಕಟ್ಟಡವೂ ನೀರಿನಲ್ಲಿ ಜಲಾವೃತವಾಗಿದೆ. ಜಿಲ್ಲಾಡಳಿತ ಕೂಡಲೇ ನಮ್ಮ ಸಮಸ್ಯೆ ಗಮನಿಸಲಿ, ಜನ ಜಾನುವಾರುಗಳ ರಕ್ಷಣೆಗೆ ಮುಂದಾಗಲಿ ಎಂದು ಹಳೇ ಗೊಂಡಬಾಳ ಗ್ರಾಮದ ಜನತೆ ಒತ್ತಾಯ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next