ಆಲಮೇಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ಅಗೌರವದಿಂದ ಮಾತನಾಡಿದ್ದು ದಲಿತ ಮುಖಂಡರು ತೀವ್ರವಾಗಿ ಖಂಡಿಸುತ್ತೇವೆ. ದಲಿತರು ಸ್ವಾಭಿಮಾನಿಗಳಿದ್ದು ಯಾವುದೆ ಆಸೆ ಆಮಿಷಗಳಿಗೆ ಓಳಗಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೆ ದಲಿತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ದಲಿತ ಮುಖಂಡ ಹರೀಶ್ ಎಂಟಮಾನ ಹೇಳಿದರು.
ಪಟ್ಟಣದಲ್ಲಿ ಗುರುವಾರ ಬಿಜೆಪಿ ದಲಿತ ಮುಖಂಡರು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಅವರು ಮಾತನಾಡಿದರು. ದಲಿತರು ಯಾವ ಪಕ್ಷ, ವ್ಯಕ್ತಿಗಳು ಗೌರವ ನೀಡುತ್ತಾರೆ ಅವರನ್ನು ಬೆಂಬಲಿಸುತ್ತೆವೆ. ಬಿಜೆಪಿ ದಲಿತರಿಗೆ ಆದ್ಯತೆ ನೀಡುತ್ತಿದೆ. ದಲಿತರ ಅಭಿವೃದ್ಧಿ ಮಾಡುತ್ತಿದ್ದಾರೆ. ಆ ಪಕ್ಷಕ್ಕೆ ಬೆಂಬಲಿಸುತ್ತೆವೆ. ಕಾಂಗ್ರೆಸ್ ಪಕ್ಷದ ಮುಖಂಡರು ದಲಿತರ ಹೆಸರು ಹೇಳಿಕೊಂಡು ದಲಿತರ ಓಟ್ ಬ್ಯಾಂಕ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ವಿನಃ ದಲಿತರ ಅಭಿವೃದ್ದಿ ಮಾಡಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ, ಡಿ.ಕೆ. ಶಿವುಕುಮಾರ ಯಾವತ್ತು ದಲಿತ ಕೇರಿಗಳಿಗೆ ಭೇಟಿ ನೀಡಿಲ್ಲ, ಕುಂದು ಕೊರತೆ ಆಲಿಸಿರುವ ಯಾವುದೆ ಉದಾಹರಣೆಗಳಿಲ್ಲ. ಸಿದ್ದರಾಮಯ್ಯ ಅಧಿಕಾರದ ಆಸೆಗಾಗಿ ಮೂಲ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಲಿಕಾರ್ಜು ಖರ್ಗೆ, ಪರಮೇಶ್ವರ ಅವರಂತ ದಲಿತ ಮುಖಂಡರನ್ನು ಮೂಲೆಗುಂಪು ಮಾಡುಲು ಹೊರಟಿದ್ದಾರೆ. ಕಲಬುರ್ಗಿ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ. ಪರಮೇಶ್ವರ ಸೋಲಿಗೆ ಸಿದ್ದರಾಮಯ್ಯ ಅವರೆ ಕಾರಣ. ಸಿದ್ದರಾಮಯ್ಯ ಅವರು ತಮ್ಮ ಕುರುಬ ಸಮಾಜದ ಮತಗಳು ಹಾಕದಂತೆ ಆದೇಶಿಸಿ ಒಳಸಂಚು ಮಾಡಿದ್ದಾರೆ. ಈ ವಿಷಯ ಎಲ್ಲ ನಾಯಕರಿಗೂ ಗೊತ್ತಿದೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವುಕುಮಾರ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತಕ್ಕ ದಲಿತರು ಪಾಠ ಕಲಿಸಲಿದ್ದಾರೆ ಎಂದರು.
ಪ್ರಧಾನಿ ಮಂತ್ರಿ ನರೇಂದ್ರ ಮೋದಿಜಿ ಅಧಿಕಾರದಲ್ಲಿ ದಲಿತರಿಗೆ ಅನೇಕ ಕೊಡಿಗೆಗಳು ನೀಡಿದ್ದಾರೆ. ಸಂವಿದಾನ ರಚನಾಕರರಾದ ಡಾ| ಬಾಬಾಸಾಹೇಬ ಅಂಬೇಡ್ಕರ ಅವರ ಮನೆ ಸೇರಿದಂತೆ ಐದು ಸ್ಥಳಗಳು ಪಂಚರತ್ನ ಯೋಜನೆ ಮೂಲಕ ಅಭಿವೃದ್ಧಿ ಮಾಡಿ ಎಲ್ಲರು ಭೇಟಿ ನೀಡುವಂತ ಪ್ರವಾಸಿ ತಾಣವಾಗಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವರು ಏನು ಮಾಡಿದ್ದಾರೆ. ಅಂಬೇಡ್ಕರ ಅವರ ಅಂತ್ಯಸಂಸ್ಕಾರಕ್ಕೆ ಜಾಗವು ನೀಡಲಿಲ್ಲ. 70 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ದಲಿತರಿಗೆ ನೀಡಿವ ಕೊಡುಗೆ ಶೂನ್ಯ. ಅಂಬೇಡ್ಕರ್ ಅವರ ಸಂದೇಶದಂತೆ ದಲಿತರು ಒಂದಾಗಿ ಸ್ವಾಭಿಮಾನಿಗಳಾಗಿ ಬದುಕುತಿದ್ದೇವೆ ಎಂದರು.
ದಲಿತ ಮುಖಂಡರಾದ ಶಶಿಧರ ಗಣಿಯಾರ, ಮುತ್ತು ಮೇಲಿಮನಿ, ಬಾಬು ಕೆಳಗಿನಮನಿ, ಗಂಗುಬಾಯಿ ಅಮಲಜರಿ, ನಾಗು ಕೆಳಗಿಮನಿ, ಮುದಕು ಆಸಂಗಿಹಾಳ, ಮಾಣಿಕ ಕಲಕುಟಗೇರ ಮುಂತಾದವರು ಇದ್ದರು.