Advertisement

ದಲಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ

04:51 PM Jul 28, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಗಂಗೂರ ಗ್ರಾಮದಲ್ಲಿರುವ ಚಾಕರಿ (ಇನಾಮ) ಜಮೀನನ್ನು ಮರಳಿ ಭೂಸ್ವಾಧೀನ ಪಡಿಸಿಕೊಂಡು ಅದನ್ನು ಮಾದಿಗ ಸಮಾಜದ ಸ್ಮಶಾನ ಭೂಮಿ ಎಂದು ಘೋಷಿಸುವಂತೆ ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟ, ಗಂಗೂರಿನ ಪ್ರಮುಖರು ಮತ್ತು ಮಾದಿಗ ಸಮಾಜದ ಸದಸ್ಯರು ಬುಧವಾರ ಗಂಗೂರು ಗ್ರಾಮದಿಂದ ಪಾದಯಾತ್ರೆ ನಡೆಸಿದರು.

Advertisement

ಪಟ್ಟಣಕ್ಕೆ ಆಗಮಿಸಿ ಹಲಗೆ ಬಾರಿಸುತ್ತ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗ್ರಾಮದ ದಲಿತ ಪರಿವಾರದವರು ಮಾರುತೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಲಗಿ ಸೇವೆ ಮಾಡುತ್ತಿದ್ದರು. ಇದರಿಂದಾಗಿ ಬ್ರಿಟಿಷ್‌ ಸರ್ಕಾರದ ಕಾಲದಲ್ಲಿ ದೇವಸ್ಥಾನದಿಂದ ಇವರಿಗೆ 2.8 ಎಕರೆ ಜಮೀನನ್ನು ಹಲಗಿ ಜಮೀನು ಅಂತ ದುರಗಪ್ಪ ಮಾದರ, ಭೀಮಪ್ಪ ಮಾದರ, ರಾಮಪ್ಪ ಮಾದರ, ಚಂದ್ರಪ್ಪ ಮಾದರ, ಬಸಪ್ಪ ಮಾದರ ಸಹೋದರರಿಗೆ ನೀಡಲಾಗಿತ್ತು.ಈ ಜಮೀನನ್ನು ಬೇರೊಬ್ಬರು ತಮ್ಮ ಹೆಸರಿಗೆ ಮಡಿಕೊಂಡು ಬೇರೆ ಕೃಷಿಯೇತರ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ.

1947ರಿಂದ ಇಲ್ಲಿಯವರೆಗೆ ಆ ಜಮೀನು ಮಾದಿಗ ಸಮಾಜದ ಕಬ್ಜಾದಲ್ಲಿದ್ದು, ಇದನ್ನು ಮರಳಿ ಕೊಡಿಸಬೇಕು. ಆ ಜಮೀನಿನಲ್ಲಿ ಮಾದಿಗ ಸಮಾಜದವರ ಪೂರ್ವಜರ ಸಮಾಧಿಗಳಿದ್ದು, ಅಲ್ಲಿ ಶವ ಸಂಸ್ಕಾರ ಮಾಡುತ್ತ ಬೇಸಾಯ ಮಾಡಲಾಗುತ್ತಿತ್ತು. ಇದನ್ನು ಕೂಡಲೇ ಭೂಸ್ವಧೀನಪಡಿಸಿಕೊಂಡು ಸ್ಮಶಾನ ಭೂಮಿ ಎಂದು ಘೋಷಿಸುವಂತೆ ಆಗ್ರಹಿಸಿಲಾಗಿದೆ.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ. ಮುದೂರ, ಗಂಗೂರಿನ ಮಾದಿಗ ಸಮುದಾಯದ ಕುಟುಂಬದವರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next