Advertisement

ಕಾಂಗ್ರೆಸ್‌ನಿಂದ ದಲಿತರ ಉದ್ಧಾರ ಅಸಾಧ್ಯ; ಬಿಜೆಪಿ

06:37 PM Sep 24, 2021 | Nagendra Trasi |

ವಿಜಯಪುರ: ಸ್ವಾತಂತ್ರ್ಯಾ ನಂತರ 75 ವರ್ಷಗಳಿಂದ ಸ್ವಾರ್ಥ ರಾಜಕಾರಣ ಮಾಡುತ್ತಲೇ ಇರುವ ಕಾಂಗ್ರೆಸ್‌ ಪಕ್ಷ, ದಲಿತರಿಗೆ ಅಭ್ಯುದಯಕ್ಕೆ ಕಾರ್ಯಕ್ರಮ ಅನುಷ್ಠಾನಕ್ಕೆ ತರದೇ ವಂಚಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು.

Advertisement

ನಗರದಲ್ಲಿ ಬಿಜೆಪಿ ಎಸ್‌.ಸಿ. ಮೋರ್ಚಾದ ನಗರ ಮಂಡಲದಿಂದ ಗ್ಯಾಂಗಬಾವುಡಿ ಯಂತ್ರೋದ್ಧಾರ ಹನುಮಾನ ಮಂದಿರದಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ದಲಿತೋದ್ಧಾರ ಅಸಾಧ್ಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ-ಮನೆಗೆ ಮುಟ್ಟವಂತೆ ನಮ್ಮ ಎಸ್‌.ಸಿ ಮೋರ್ಚಾ ಕಾರ್ಯಕರ್ತರು ಮುಂದಾಗಬೇಕು ಎಂದು ಸಲಹೆ ನೀಡಿದರು. ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಪ್ರತಿಜ್ಞೆ ಬೋಧಿ ಸಿ ಮಾತನಾಡಿ, ಭಾರತದ 75ನೇ ಸ್ವಾತಂತ್ರ್ಯಾ ಅಮೃತ ಮಹೋತ್ಸವದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ 20 ವರ್ಷಗಳ ಅ ಧಿಕಾರವಧಿ  ಪೂರ್ಣಗೊಳಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಸೇವಾ ಮತ್ತು ಸಮರ್ಪಣೆ ಅಭಿಯಾನದದ ಪ್ರತಿಜ್ಞೆ ಮಾಡಿ, ದೇಶದ ಅಖಂಡತೆ, ಪರಿಸರ ಸಂಕರಣೆ ಹಾಗೂ ಸಕಲ ಜೀವ ರಾಶಿಗಳ ಮಧ್ಯೆ ಸಹಜವಾಗಿ ಬದುಕುತ್ತೇನೆ. ಏಕ ಬಳಿಕೆಯ ಪ್ಲಾಸ್ಟಿಕ್‌ ತ್ಯಜಿಸಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದುರಭ್ಯಾಸಗಳಿಂದ ಮುಕ್ತವಾಗಿ ಜೀವಿಸುತ್ತೇನೆ. ಹಿರಿಯರನ್ನು ಗೌರವಿಸಿ ಮತ್ತು ಕಿರಿಯನ್ನು ಪ್ರೀತಿಸುವ ಮೂಲಕ ಸಮಾಜದಲ್ಲಿ ಹೊಣೆಗಾರಿಕೆ ಪ್ರಜೆಯಾಗಿ ಬದುಕುವ ಪ್ರತಿಜ್ಞೆ ಮಾಡಬೇಕಿದೆ ಎಂದರು.

ನಗರ ಅಧ್ಯಕ್ಷ ವಿಠuಲ ನಡುವಿನಕೇರಿ ಮಾತನಾಡಿ, ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಮತ ಬ್ಯಾಂಕ್‌ಗಾಗಿ ಬಳಸಿಕೊಂಡು ದಲಿತರನ್ನು ರಾಜಕೀಯ ಗಾಳವಾಗಿಸಿಕೊಳ್ಳುತ್ತ ವಂಚಿಸುತ್ತಲೇ ಬರುತ್ತಿದೆ. ಪ್ರಸ್ತುತ ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷದಿಂದ ಅನ್ಯಾಯಕ್ಕೀಡಾದ ದಲಿತರನ್ನು ಬಲಿಷ್ಠಗೊಳಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಶೋಷಿತ ಸಮುದಾಯಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ದಲಿತರನ್ನು ವಿದ್ಯಾವಂತರನ್ನಾಗಿ ಮಾಡಿ, ದೇಶದಲ್ಲೇ ಮಾದರಿ ಜೀವನ ನಡೆಸುವಂತೆ ಮಾಡಬೇಕಿದೆ ಎಂದರು.

Advertisement

ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ದಲಿತರ ವಿರೋ ಧಿಯಾಗಿದೆ. ದಲಿತರನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್‌ಗೆ ದಲಿತರೆಲ್ಲ ತಕ್ಕ ಪಾಠ ಕಲಿಸಬೇಕಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ರೂಪಿಸಿರುವ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಮಲ್ಲಮ್ಮ ಜೋಗೂರ, ಗೀತಾ ಕುಗ್ಗುನೂರ, ಭರತ ಕೋಳಿ, ಪಾಪುಸಿಂಗ್‌ ರಜಪೂತ, ರಾಜೇಶ ತವಸೆ, ಸಂಪತ್ತ ಕೋಹಳ್ಳಿ, ರಾಜೇಂದ್ರ ವಾಲಿ, ವಿನಾಯಕ ದಹಿಂಡೆ, ಅಭಿಷೇಕ ಸಾವಂತ, ಶ್ರೀನಿವಾಸ ಕಂದಗಲ, ಮುತ್ತಣ್ಣ ಸಾಸನೂರ, ಉದಯ ಕನ್ನೋಳ್ಳಿ, ಸದಾಶಿವ ಚಲವಾದಿ, ಪ್ರಹ್ಲಾದ ಕಾಂಬಳೆ, ಸಚಿನ್‌ ಸವನಳ್ಳಿ, ಬಾಬು ಜಾಧವ, ಸತೀಶ ರಾಠೊಡ, ದುಗೇಶ ತಿಕೋಟಿಕರ, ಶ್ರೀಕಾಂತ ಗಚ್ಚಿನಮನಿ, ಸಾಗರ ಶೇರಖಾನಿ, ಬಾಬು ಮನಗೂಳಿ, ರಮೇಶ ದೇವಕರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ದಲಿತರಿಗೆ ಮೂಲಭೂತ ಸೌಲಭ್ಯ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ದಲಿತರು ಮುಂದಿದ್ದಾರೆ. ಆದರೆ ದೀರ್ಘ‌ಕಾಲ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಪಕ್ಷ ದಲಿತರನ್ನು ರಾಜಕೀಯವಾಗಿ ಬಳಸಿಕೊಂಡಿತೇ ಹೊರತು ಅವರ ಅಭಿವೃದ್ಧಿ ಮಾಡಲಿಲ್ಲ.

ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next