Advertisement

Viral Video: ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಚಪ್ಪಲಿ ನೆಕ್ಕಿಸಿದ ಲೈನ್ ಮ್ಯಾನ್

11:51 AM Jul 09, 2023 | Team Udayavani |

ಲಕ್ನೋ: ದಲಿತ ವ್ಯಕ್ತಿಯೊಬ್ಬ ವಿದ್ಯುತ್ ವೈರಿಂಗ್ ಅನ್ನು ಪರಿಶೀಲಿಸಿದ್ದಕ್ಕಾಗಿ ಆತನ ಮೇಲೆ ಹಲ್ಲೆ ನಡೆಸಿ ಗುತ್ತಿಗೆ ಲೈನ್ ಮ್ಯಾನ್ ನ ಚಪ್ಪಲಿಗಳನ್ನು ನೆಕ್ಕಿಸಿದ ಘಟನೆ ಉತ್ತರ ಪ್ರದೇಶದ ಸೋನ್‌ ಭದ್ರಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಈ ಘಟನೆ ಗುರುವಾರ ನಡೆದಿದ್ದು, ಶನಿವಾರದಂದು ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವೀಡಿಯೋ ಒಂದರಲ್ಲಿ, 21 ವರ್ಷದ ದಲಿತ ವ್ಯಕ್ತಿಯ ಮೇಲೆ ವಿದ್ಯುತ್ ಕಾರ್ಮಿಕರು ಅಮಾನುಷವಾಗಿ ಹಲ್ಲೆ ನಡೆಸಿ ನಿಂದಿಸುತ್ತಿರುವುದನ್ನು ಕಾಣಬಹುದು ಮತ್ತು ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು “ವಾಟ್ಸಪ್ ಗ್ರೂಪ್ ನಲ್ಲಿ” ಹಂಚಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ. ಎರಡನೇ ವೀಡಿಯೊದಲ್ಲಿ, ಆ ವ್ಯಕ್ತಿ ಕೆಲಸಗಾರನ ಚಪ್ಪಲಿಗಳನ್ನು ನೆಕ್ಕುತ್ತಿರುವುದನ್ನು ಮತ್ತು ಅವನ ಕಿವಿಗಳನ್ನು ಹಿಡಿದುಕೊಂಡು ಕ್ಷಮೆಯಾಚಿಸುವುದನ್ನು ಕಾಣಬಹುದು.

ಸೋನ್ ಭದ್ರಾ ಜಿಲ್ಲೆಯ ಶಹಗಂಜ್ ಪ್ರದೇಶದಲ್ಲಿ ಗುತ್ತಿಗೆ ಲೈನ್‌ಮ್ಯಾನ್ ಆಗಿರುವ ತೇಜ್ಬಾಲಿ ಸಿಂಗ್ ಪಟೇಲ್ ಎಂದು ಗುರುತಿಸಲಾದ ಆರೋಪಿಯ ವಿರುದ್ಧ ಪೊಲೀಸರು ಶಹಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಜೇಂದ್ರ ಚಮರ್ ಅವರು ಶಹಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ದಾಖಲಾಗಿದ್ದು, ಪಟೇಲ್ ನನ್ನು ಬಂಧಿಸಲಾಗಿದೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಚಾಮರ್, ‘ನಾನು ನನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದೆ. ವಿದ್ಯುತ್ ತಂತಿಯಲ್ಲಿ ಸ್ವಲ್ಪ ಸಮಸ್ಯೆ ಇತ್ತು ಮತ್ತು ನಾನು ಅದನ್ನು ನೋಡುತ್ತಿದ್ದೆ. ತೇಜ್ಬಲಿ ಅಲ್ಲಿಗೆ ಬಂದು ನನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಲು ಆರಂಭಿಸಿದ. ಅವನು ನನ್ನ ಪಾದರಕ್ಷೆಗೆ ಉಗುಳಿ ನೆಕ್ಕುವಂತೆ ಮಾಡಿದನು. ಎರಡು ದಿನ ನಾನು ಏನನ್ನೂ ಹೇಳಲಿಲ್ಲ. ಆದರೆ ಈಗ ಪ್ರಕರಣ ದಾಖಲಿಸಲು ಬಂದಿದ್ದೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next