Advertisement

ಠಾಣೆಯಲ್ಲಿ ನ್ಯಾಯ ಸಿಗದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ

02:29 PM Nov 16, 2021 | Team Udayavani |

ಗುಂಡ್ಲುಪೇಟೆ: ಶೀಘ್ರ ಪೊಲೀಸರೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾ ಗುವುದು. ಠಾಣೆಯಲ್ಲಿ ನ್ಯಾಯ ಸಿಗದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದರೆ ನಾವು ಸರಿಪಡಿಸುತ್ತೇವೆ ಎಂದು ಡಿವೈಎಸ್ಪಿ ಪ್ರಿಯ ದರ್ಶಿಣಿ ಸಾಣೆಕೊಪ್ಪ ಭರವಸೆ ನೀಡಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರೊಂದಿಗೆ ಸಭೆ ನಡೆಸಿ ದೂರುಗಳನ್ನು ಆಲಿಸಿ ಮಾತನಾಡಿದ ಅವರು, ಸಭೆ ನಡೆಸಿ ಕೆಲ ನ್ಯೂನತೆಗಳನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿಇಂತಹಘಟನೆಆಗ ದಂತೆ ಕ್ರಮ ವಹಿಸಲಾಗುವುದು ಎಂದರು.

ಇದಕ್ಕೂ ಮುನ್ನ ಮಾತ ನಾಡಿದ ಅಂಬೇಡ್ಕರ್‌ ಸೇನೆ ತಾಲೂಕು ಗೌರವಾಧ್ಯಕ್ಷ ಗೋವಿಂದರಾಜು, ಕಳೆದ ಕೆಲ ದಿನಗಳ ಹಿಂದೆ ಲಾರಿ ಅಪಘಾತದ ವಿಚಾರವಾಗಿ ಚಾಲಕನ ಮೇಲೆ ಹಲ್ಲೆ ನಡೆದರು ಸಹ ಶಾಸಕರ ಬೆಂಬಲಿಗರು ಎಂಬ ಕಾರಣಕ್ಕೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದರು. ಮುಖಂಡ ಸುಭಾಷ್‌ ಮಾಡ್ರಹಳ್ಳಿ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ದಲಿತ ಮುಖಂಡರ ಕೊಲೆ ನಡೆದಿದೆ. ಆದರೆ ಯಾವುದೇ ಆರೋಪಿಯನ್ನು ಬಂಧಿಸಿಲ್ಲ ಎಂದರು.

ಲಕ್ಕೂರು ಗಿರೀಶ್‌ ಮಾತನಾಡಿ,ಕೇವಲ ಹೆಸರಿಗೆ ಮಾತ್ರ ಠಾಣೆಯಲ್ಲಿ ಜನ ಸ್ನೇವಾ ಕೇಂದ್ರವಿದೆ. ಕೆಲ ಅಕ್ರಮಗಳಲ್ಲಿ ಪೊಲೀ ಸರು ಶಾಮೀಲಾಗಿದ್ದಾರೆ ಎಂದರು.

ಜಾಥಾ, ಧರಣಿ: ಪಟ್ಟಣದ ಪ್ರವಾಸಿ ಮಂದಿರದಿಂದ ಹೆದ್ದಾರಿ ಮೂಲಕ ಜಾಥಾ ಹೊರಟು ಠಾಣೆ ಮುಂದೆ ಧರಣಿ ನಡೆಸಲು ಮುಂದಾದ ಅಂಬೇಡ್ಕರ್‌ ಸೇನೆ ಹಾಗೂ ಜಯ ಕರ್ನಾಟಕ ಸಂಘಟನೆ ಸದಸ್ಯರನ್ನು ಪೊಲೀಸರು ತಡೆದರು. ಬಳಿಕ ಡಿವೈಎಸ್ಪಿ ಪ್ರಿಯದರ್ಶಿಣಿ ಸಾಣೆ ಕೊಪ್ಪ ಅವರು ತಮ್ಮ ನೇತೃತ್ವದಲ್ಲಿ  ಸಭೆ ನಡೆಸಿ, ಮುಖಂಡರ ದೂರು ದುಮ್ಮಾನಗಳನ್ನು ಆಲಿಸಿದರು.

Advertisement

ಸಭೆಯಲ್ಲಿಅಂಬೇಡ್ಕರ್‌ ಸೇನೆ ತಾಲೂಕು ಅಧ್ಯಕ್ಷ ದೀಪಕ್‌, ಟೌನ್‌ ಘಟಕದ ಅಧ್ಯಕ್ಷ ಗಿರೀಶ್‌, ಉಪಾಧ್ಯಕ್ಷ ಮಹೇಶ್‌, ಟೌನ್‌ ಕಾರ್ಯದರ್ಶಿಗಣೇಶ್‌,ತಾಲೂಕುಕಾರ್ಯದರ್ಶಿ ನಿಖೀಲ್‌, ಯಶ್ವಂತ್‌ ಜಗ್ಗಿ, ಅಕ್ಷಯ್‌, ಅರುಣ್‌.ವಿನಯ್‌,ವಿನು,ಉಮಾಶಂಕರ್‌, ಮುಖಂಡರಾದ ನಾಗೇಂದ್ರ, ಸೋಮಣ್ಣ, ಮುತ್ತಣ್ಣ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next