Advertisement

ಮುಂಬಯಿ ಶೇರು: 5 ದಿನದಲ್ಲಿ 1,100 ಅಂಕ ಕುಸಿತ; 100 ಬಿಲಿಯ ನಷ್ಟ

11:47 AM Aug 12, 2017 | udayavani editorial |

ಹೊಸದಿಲ್ಲಿ : ಮುಂಬಯಿ ಶೇರು ಪೇಟೆ ಈ ವಾರದ ಐದೂ ದಿನಗಳ ವಹಿವಾಟಿನಲ್ಲಿ ಒಟ್ಟಾರೆಯಾಗಿ 1,100 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿದೆ. ಇದರ ಪರಿಣಾಮವಾಗಿ ಹೂಡಿಕೆದಾರರು 100 ಶತಕೋಟಿ ಡಾಲರ್‌ ನಷ್ಟಕ್ಕೆ ಗುರಿಯಾಗಿದ್ದಾರೆ.

Advertisement

ಬಾಂಬೇ ಸ್ಟಾಕ್‌ ಎಕ್ಸ್‌ಚೇಂಜ್‌ನ ಈಗಿನ ಮಾರುಕಟ್ಟೆ ಬಂಡವಾಳ ಮೌಲ್ಯ 133.1 ಲಕ್ಷ ಕೋಟಿ ರೂ.ಗೆ ಕುಸಿಯುವ ಮೂಲಕ ಭಾರತೀಯ ಹೂಡಿಕೆದಾರರು ಸುಮಾರು 100 ಶತಕೋಟಿ ಡಾಲರ್‌ ಅಥವಾ 6.4 ಲಕ್ಷ ಕೋಟಿ ರೂ. ನಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. 

ಅಮೆರಿಕ – ಉತ್ತರ ಕೊರಿಯ ಹಾಗೂ ಭಾರತ -ಚೀನ ನಡುವಿನ ರಣೋತ್ಸಾಹದ ಪರಿಣಾವಾಗಿ ವಿಶ್ವಾದ್ಯಂತ ಶೇರು ಮಾರುಕಟ್ಟೆಗಳು ಕುಸಿದಿವೆ. ಅಂತೆಯೇ ಮುಂಬಯಿ ಶೇರುಮಾರುಕಟ್ಟೆ ಈ ವಾರದ ಐದೂ ದಿನಗಳ ವಹಿವಾಟಿನಲ್ಲಿ 1,100 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿದೆ ಮತ್ತು ಭಾರತೀಯ ಹೂಡಿಕೆದಾರರ ಹೂಡಿಕೆ ಮೌಲ್ಯವು ಸುಮಾರು 6.4 ಲಕ್ಷ ಕೋಟಿ ರೂ.ಗಳಷ್ಟು ಕೊರೆದು ಹೋಗಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. 

ಶೇರು ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಏಶ್ಯ ಹಾಗೂ ಐರೋಪ್ಯ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತಲೆದೋರಿದೆ. ಕಳೆದ ವಾರ ಸಾರ್ವಕಾಲಿಕ ದಾಖಲೆಯ ಹೊಸ ಎತ್ತರಗಳನ್ನು ತಲುಪಿದ್ದ ಶೇರು ಮಾರುಕಟ್ಟೆಗಳು ಈಗಿರುವ ಮಟ್ಟದಲ್ಲಿ  ದೃಢತೆಯನ್ನು ಕಾಣಲು ಹೆಣಗುತ್ತಿವೆ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next