Advertisement

ದಲೈಲಾಮಾ ವಿವಾದಾಸ್ಪದ ವಿಡಿಯೋಗೆ ನೆಟ್ಟಿಗರು ಗರಂ

10:31 PM Apr 09, 2023 | Team Udayavani |

ನವದೆಹಲಿ: ಟಿಬೆಟಿಯನ್‌ ಧರ್ಮಗುರು ದಲೈಲಾಮಾ ಬಾಲಕನೊಬ್ಬನಿಗೆ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ದಲೈಲಾಮಾರ ವರ್ತನೆಗೆ ತೀವ್ರ ಆಕ್ಷೇಪ, ಟೀಕೆಗಳು ವ್ಯಕ್ತವಾಗಿವೆ.

Advertisement

ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಬಂದಿದ್ದ ಭಾರತೀಯ ಮಗುವಿಗೆ ಮುತ್ತಿಟ್ಟು ನಂತರ, “ನೀನು ನನ್ನ ನಾಲಿಗೆ ಚೀಪುವೆಯಾ’ ಎಂದು ದಲೈಲಾಮಾ ಕೇಳಿದ್ದಾರೆ.

ಈ ವಿಡಿಯೋವನ್ನು ಜೂಸ್ಟ್‌ ಬ್ರೋಕರ್ ಎಂಬ ಟ್ವಿಟರ್‌ ಬಳಕೆದಾರ ಹಂಚಿಕೊಂಡಿದ್ದು, ದಲೈಲಾಮಾರ ಈ ವರ್ತನೆಯ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.

ಅನೇಕ ನೆಟ್ಟಿಗರು ಕೂಡ ಈ ರೀತಿ ವರ್ತನೆ ಸಲ್ಲದು ಎಂದು ಕಟುವಾಗಿ ಟೀಕಿಸಿದ್ದು, ಟಿಬೆಟ್‌ ಧರ್ಮಗುರುವಿನ ವರ್ತನೆ ಈಗ ವಿವಾದ ಹುಟ್ಟುಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next