Advertisement

ದಲೈ ಲಾಮಾ ಗಡ್ಡ ಎಳೆಯೋದು ಯಾಕೆ? ಬಾಬಾ ದಾಡಿಗೂ ಕೈ

04:42 PM Aug 14, 2017 | Sharanya Alva |

ಮುಂಬೈ: ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಸದಾ ಹಸನ್ಮುಖಿ. ತಮ್ಮನ್ನು ಭೇಟಿಯಾಗಲು ಬಂದವರನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ಮಾತನಾಡಿಸುವ ಅವರ ಗುಣ ಜಗತ್‌ಪ್ರಸಿದ್ಧ. ಆದರೆ ದಲೈ ಲಾಮಾರ ಇನ್ನೊಂದು ಗುಣದ ಪರಿಚಯ ಜಗತ್ತಿಗೆ ಅಷ್ಟಾಗಿ ಇಲ್ಲ. ಅವರಿಗೆ ದಾಡಿ ಕಂಡರೆ ವಿಪರೀತ ಪ್ರೀತಿ! ಗಡ್ಡ ಬಿಟ್ಟವರು ಯಾರೇ ಇರಲಿ, ಅವರು ಚಿಕ್ಕ ಮಕ್ಕಳಂತೆ ನಗುತ್ತಾ ದಾಡಿ ಎಳೆದೇ ಬಿಡುತ್ತಾರೆ.

Advertisement

ಮುಂಬೈನಲ್ಲಿ ಭಾನುವಾರ ನಡೆದ ಶಾಂತಿ ಮತ್ತು ಸಾಮರಸ್ಯ ಸಮಾವೇಶದಲ್ಲೂ ದಲೈ ಲಾಮಾರ ದಾಡಿ ಪ್ರೇಮ ಮತ್ತೂಮ್ಮೆ ಜಾಹೀರಾಯಿತು. ತಮ್ಮ ಪಕ್ಕ ಕುಳಿತ ಯೋಗಗುರು ಬಾಬಾ ರಾಮ್‌ದೇವ್‌ ಅವರ ದಾಡಿ ಜಗ್ಗಿದ್ದಾರೆ ಈ ಬೌದ್ಧ ಗುರು. ರಾಮ್‌ದೇವ್‌ ಅವರಿಗೆ ದಲೈ ಲಾಮಾ ಹೀಗೆ ಮಾಡಿದ್ದು ಈ ಮೊದಲೇನೂ ಅಲ್ಲವಾದ್ದರಿಂದ, ಅವರೂ ಈ ಪ್ರೀತಿಯನ್ನು ಮತ್ತೂಮ್ಮೆ ಖುಷಿಯಿಂದಲೇ ಸ್ವೀಕರಿಸಿದ್ದಾರೆ.

ಅಷ್ಟೇ ಅಲ್ಲ, ಸ್ವಲ್ಪ ಹೊತ್ತು ಬಿಟ್ಟು ಬಾಬಾ ರಾಮ್‌ದೇವ್‌ ಅವರು ದಲೈ ಲಾಮಾ ಅವರ ಮಡಿಲಲ್ಲಿ ಮಗುವಿನಂತೆ ತಲೆ ಆನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದಲೈ ಲಾಮಾ ರಾಮ್‌ದೇವ್‌ ಅವರಿಗೆ ಕಚಗುಳಿ ಇಟ್ಟು ನಗಿಸಿದ್ದಾರೆ. ಇವರಿಬ್ಬರು ಇಂಥ ಆತ್ಮೀಯ ಕ್ಷಣಗಳನ್ನು ನೋಡಿದ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next