Advertisement

Dalai Lama:13 ವರ್ಷಗಳ ಬಳಿಕ 3 ದಿನಗಳ ಭೇಟಿಗಾಗಿ ಸಿಕ್ಕಿಂಗೆ ಆಗಮಿಸಿದ ದಲೈ ಲಾಮಾ

06:25 PM Dec 11, 2023 | sudhir |

ಗ್ಯಾಂಗ್ಟಕ್: ಟಿಬೆಟ್‌ನ ಆಧ್ಯಾತ್ಮಿಕ ಗುರು 14 ನೇ ದಲೈಲಾಮಾ ಟೆಂಜಿನ್ ಗ್ಯಾಟ್ಸೊ ಅವರು 13 ವರ್ಷಗಳ ನಂತರ ಮೂರು ದಿನಗಳ ಭೇಟಿಗಾಗಿ ಸೋಮವಾರ ಬೆಳಿಗ್ಗೆ ಸಿಕ್ಕಿಂಗೆ ಆಗಮಿಸಿದರು.

Advertisement

ಪೂರ್ವ ಸಿಕ್ಕಿಂನ ಲಿಬಿಂಗ್ ಮಿಲಿಟರಿ ಹೆಲಿಪ್ಯಾಡ್‌ನಲ್ಲಿ ದಲೈ ಲಾಮಾ ಬೆಳಿಗ್ಗೆ 10.30 ರ ಸುಮಾರಿಗೆ ಬಂದಿಳಿದ ಅವರನ್ನು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಸಂಪುಟ ಸಚಿವರು ಮತ್ತು ಇತರ ಗಣ್ಯರು ಅವರನ್ನು ಸ್ವಾಗತಿಸಿದರು. ಅದಾದ ಬಳಿಕ ದಲೈಲಾಮಾ ಅವರನ್ನು ಹೆಲಿಪ್ಯಾಡ್ ಬಳಿಯ ವಿಸಿ ಗಂಜು ಲಾಮಾ ಗೇಟ್‌ನಿಂದ ರಾಷ್ಟ್ರೀಯ ಹೆದ್ದಾರಿ 10 ರ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು

ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಇಂದು ಹೋಟೆಲ್‌ನಲ್ಲಿ ದಲೈಲಾಮಾ ಅವರನ್ನು ಭೇಟಿಯಾಗಲಿದ್ದಾರೆ. ದಲೈ ಲಾಮಾ ಅವರು ಡಿಸೆಂಬರ್ 12 ರಂದು ರಾಜಧಾನಿ ಗ್ಯಾಂಗ್‌ಟಾಕ್‌ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಡಿಸೆಂಬರ್ 14 ರಂದು ಸಿಕ್ಕಿಂನಿಂದ ಹಿಂತಿರುಗಲಿದ್ದಾರೆ.

ದಲೈ ಲಾಮಾ ಅವರು ಈ ವರ್ಷದ ಅಕ್ಟೋಬರ್‌ನಲ್ಲಿ ಸಿಕ್ಕಿಂಗೆ ಭೇಟಿ ನೀಡಬೇಕಾಗಿತ್ತು ಅದಕ್ಕಾಗಿ ಸಿಕ್ಕಿಂ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಿತ್ತು, ಆದರೆ ಅಕ್ಟೋಬರ್ 3 ಮತ್ತು 4 ರ ರಾತ್ರಿ ತೀಸ್ತಾ ಪ್ರವಾಹದಿಂದಾಗಿ ಅವರ ಕಾರ್ಯಕ್ರಮವನ್ನು ಮುಂದೂಡಲಾಯಿತು.

ದಲೈ ಲಾಮಾ ಅವರು 2010 ರಲ್ಲಿ ಸಿಕ್ಕಿಂಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು ಆ ಬಳಿಕ ಹದಿಮೂರು ವರ್ಷಗಳ ಬಳಿಕ ಭೇಟಿ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ: ಸುಪ್ರೀಂ ತೀರ್ಪಿನಿಂದ ಕಾಂಗ್ರೆಸ್ ಗೆ ಮುಖಭಂಗವಾಗಿದೆ: ಪ್ರಮೋದ್ ಮುತಾಲಿಕ್

Advertisement

Udayavani is now on Telegram. Click here to join our channel and stay updated with the latest news.

Next