Advertisement

ದಲೈಲಾಮಾರಿಂದ ಬೌದ್ಧ ಧರ್ಮದ ಮೂರನೇ ಅತ್ಯುನ್ನತ ನಾಯಕನ ಅಭಿಷೇಕ

10:23 PM Mar 27, 2023 | Team Udayavani |

ಧರ್ಮಶಾಲಾ: ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಅವರು ಅಮೆರಿಕದಲ್ಲಿ ಜನಿಸಿದ ಮಂಗೋಲಿಯನ್ ಹುಡುಗನನ್ನು ಮೂರನೇ ಅತ್ಯುನ್ನತ ಶ್ರೇಣಿಯ 10 ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಹೆಸರಿಸಿದ್ದಾರೆ ಎಂದು ವರದಿಯಾಗಿದೆ.

Advertisement

ವರದಿಯ ಪ್ರಕಾರ, ದೇಶಭ್ರಷ್ಟನಾಗಿ ವಾಸಿಸುತ್ತಿರುವ ಬೌದ್ಧ ನಾಯಕ ಧರ್ಮಶಾಲಾದಲ್ಲಿ ಮಾರ್ಚ್ 8 ರಂದು ನಡೆದ ಸಮಾರಂಭದಲ್ಲಿ ಎಂಟು ವರ್ಷದ ಬಾಲಕನಿಗೆ ದಲೈ ಲಾಮಾ ದೀಕ್ಷೆ ನೀಡಿದ್ದಾರೆ.ಸಮಾರಂಭದ ಸುದ್ದಿಯನ್ನು ಉತ್ಸಾಹ ಮತ್ತು ಆತಂಕದಿಂದ ಸ್ವೀಕರಿಸಲಾಯಿತು, ಏಕೆಂದರೆ ಈ ಕ್ರಮದ ಬಗ್ಗೆ ಚೀನಾದ ಅಸಮಾಧಾನದ ಬೆದರಿಕೆ ಉಳಿದಿದೆ ಎಂದು ವರದಿಯಲ್ಲಿ ಸೇರಿಸಲಾಗಿದೆ.

ಬಾಲಕನನ್ನು ಮೂರನೇ ಅತ್ಯುನ್ನತ ಲಾಮಾ ಎಂದು ಅಭಿಷೇಕಿಸುವ ಕ್ರಮವು ಚೀನಾವನ್ನು ಕೆರಳಿಸುವ ಸಾಧ್ಯತೆಯಿದೆ, ಅದು ತನ್ನದೇ ಸರ್ಕಾರದಿಂದ ಆಯ್ಕೆಯಾದ ಬೌದ್ಧ ನಾಯಕರನ್ನು ಮಾತ್ರ ಗುರುತಿಸುತ್ತದೆ ಎಂದು ಸಮರ್ಥಿಸಿಕೊಂಡಿದೆ.

ಎಂಟು ವರ್ಷದ ಬಾಲಕನಿಗೆ ಅವಳಿ ಸಹೋದರನಿದ್ದಾನೆ ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಗನಾಗಿದ್ದು ಮಾಜಿ ಮಂಗೋಲಿಯನ್ ಸಂಸದರ ಮೊಮ್ಮಗ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next