Advertisement

ಮಂಗಳೂರು: ನಿಗಾ ಕೇಂದ್ರಗಳಿಗೆ ಮಾರ್ಗಸೂಚಿ

11:35 AM May 11, 2020 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮೇ 12ರಿಂದ ವಿದೇಶಗಳಲ್ಲಿರುವ ಕನ್ನಡಿಗರು ಆಗಮಿಸಲಿದ್ದು, ಅವರನ್ನು ಹೊಟೇಲ್‌/ ಲಾಡ್ಜ್ ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸುವ ಸಂದರ್ಭದಲ್ಲಿ ಹೊಟೇಲ್‌/ ಲಾಡ್ಜ್ ಸಿಬಂದಿ ಹಾಗೂ ಕ್ವಾರಂಟೈನ್‌ಗೆ
ಒಳಗಾಗುವವರು ಪಾಲಿಸಬೇಕಾದ ನಿಯಮಗಳ ಕುರಿತಂತೆ ರವಿವಾರ ಚರ್ಚಿಸಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ.

Advertisement

ಮಂಗಳೂರಿನ 18 ಲಾಡ್ಜ್ ಮತ್ತು 6 ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹೊಟೇಲ್‌/ ಲಾಡ್ಜ್/ ಹಾಸ್ಟೆಲ್‌ಗ‌ಳ ಸಿಬಂದಿ ಮತ್ತು ಅತಿಥಿಗಳ (ಕ್ವಾರಂಟೈನ್‌ಗೆ ಒಳಗಾಗುವವರ) ಆರೋಗ್ಯ ಪಾಲನೆ ಮತ್ತು ಸುರಕ್ಷೆ ಪ್ರಥಮ ಆದ್ಯತೆಯಾಗಿದೆ.

ಸಿಬಂದಿ ಕರ್ತವ್ಯಗಳು
ಹೊಟೇಲ್‌ ಸಿಬಂದಿ 60 ನಿಮಿಷಗಳಿಗೊಮ್ಮೆ ಕೈ ತೊಳೆಯಬೇಕು ಇಲ್ಲವೇ ಸ್ಯಾನಿಟೈಸ್‌ ಮಾಡಬೇಕು. ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಅನುಗುಣವಾಗಿ ಮಾಸ್ಕ್, ಗ್ಲೋವ್ಸ್‌ ಮತ್ತಿತರ ವೈಯಕ್ತಿಕ ಸುರಕ್ಷತಾ ಉಪಕರಣ ಹೊಂದಿರಬೇಕು.
ಹೊಟೇಲ್‌ನ ಲಿಫ್ಟ್‌ಗಳ ಬಟನ್‌ ಪ್ಯಾನೆಲ್‌ಗಳನ್ನು ಕನಿಷ್ಠ ಗಂಟೆಗೊಮ್ಮೆ ಸ್ಯಾನಿಟೈಸ್‌ ಮಾಡಲು ಸಿಬಂದಿ ನೇಮಕ ಮಾಡುವುದು.
ಲಿಫ್ಟ್‌ನಲ್ಲಿ ಒಂದು ಬಾರಿ 4ಕ್ಕಿಂತ ಹೆಚ್ಚು ಜನ ಹೋಗುವಂತಿಲ್ಲ.

ಮಾರ್ಗಸೂಚಿ ವಿವರ
– ಹೊಟೇಲ್‌/ಲಾಡ್ಜ್ ಪ್ರವೇಶ ಕಲ್ಪಿಸುವಾಗ ಭದ್ರತಾ ತಂಡದವರಿಂದ ಅಲ್ಲಿನ ಸಿಬಂದಿ ಮತ್ತು ಅತಿಥಿಗಳ ದೇಹದ ಉಷ್ಣಾಂಶದ ಪರೀಕ್ಷೆ ನಡೆಸಲಾಗುತ್ತದೆ. ಜ್ವರ ಪತ್ತೆಯಾದರೆ ಪ್ರತ್ಯೇಕ ವೈದ್ಯಕೀಯ ಆರೈಕೆಯಲ್ಲಿ ಇರಿಸಲಾಗುವುದು.

– ಅತಿಥಿಗಳು ಹೊಟೇಲ್‌ನಲ್ಲಿ ಮತ್ತು ಲಿಫ್ಟ್‌ನಲ್ಲಿ 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ರೆಸ್ಟೊರೆಂಟ್‌ಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಟೇಬಲ್‌ಗ‌ಳನ್ನು ಜೋಡಿಸಿಡಬೇಕು. ಕರ್ತವ್ಯ ನಿರತ ಸಿಬಂದಿ ತಮ್ಮ ಕೈಗಳಿಂದ ಮುಖ, ಬಾಯಿಯನ್ನು ಸ್ಪರ್ಶಿಸ ಬಾರದು ಹಾಗೂ ಅತಿಥಿಗಳಿಂದ ಹಾಗೂ ಸಹ ಸಿಬಂದಿಯಿಂದ 6 ಅಡಿ ಸಾಮಾಜಿಕ ಅಂತರವನ್ನು ಕಾಪಾಡಬೇಕು.

Advertisement

– ಹೊಟೇಲ್‌ನ ಡ್ರೈವ್‌ ವೇ, ರಿಸೆಪ್ಶನ್‌, ಲಾಬಿ, ರೆಸ್ಟೊರೆಂಟ್‌ ಪ್ರವೇಶ ದ್ವಾರ, ಸಭಾಂಗಣ, ಎಲವೇಟರ್‌ ಲ್ಯಾಂಡಿಂಗ್‌ ಪ್ರದೇಶಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇರಿಸಬೇಕು. ಬಟ್ಟೆ ಬದಲಾಯಿಸುವ ಸ್ಥಳ, ಹ್ಯಾಂಡಲ್‌ ಮತ್ತು ಮಾಸ್ಕ್ ಗಳನ್ನು ವಿಲೇವಾರಿ ಮಾಡುವ ಜಾಗಗಳಲ್ಲಿ ಆರೋಗ್ಯ ಜಾಗೃತಿಯ ಫಲಕಗಳನ್ನು ಅಳವಡಿಸಬೇಕು.

– ಆರೋಗ್ಯದಲ್ಲಿ ಏರುಪೇರಾದರೆ ಜಿಲ್ಲಾಡಳಿತಕ್ಕೆ (ದೂ: 1077) ತಿಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next