ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಕೆಂಗಣ್ಣು ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ನಿಗಾ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.
ಬಜಪೆ ಪರಿಸರದಲ್ಲಿ ವಾರದ ಹಿಂದೆ ಆರಂಭ ಗೊಂಡ ಈ ಕಾಯಿಲೆ ಹಲವು ಮಂದಿಗೆ ಹರಡಿದೆ. ಕೆಂಗಣ್ಣು ಸಮಸ್ಯೆ ಹೊಂದಿದ ತಾಯಿ ಹಾಗೂ ಮಗುವು ಚುಚ್ಚು ಮದ್ದಿಗೆ ವಾರ ಕಳೆದು ಬರುವಂತೆ ಕೆಲವು ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಚಿಸಲಾಗಿದೆ. ಇನ್ನು ಮಂಗಳೂರು ನಗರ, ಗ್ರಾಮೀಣ ಭಾಗಕ್ಕೂ ಈ ಕಾಯಿಲೆ ಹರಡುತ್ತಿದ್ದು, ಅಡ್ಯಾರ್, ಪುತ್ತೂರು, ಬೆಳ್ತಂಗಡಿ ಭಾಗ ದಿಂದಲೂ ವರದಿ ಬರುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ “ಉದಯವಾಣಿ’ಗೆ ಪ್ರತಿ ಕ್ರಿಯಿಸಿ, “ಜಿಲ್ಲೆಯ ಕೆಲವೊಂದು ಕಡೆಗಳಲ್ಲಿ ಕೆಂಗಣ್ಣು ಕಾಯಿಲೆ ಹರಡುತ್ತಿದ್ದು ನಿಗಾ ಇರಿಸ ಲಾಗಿದೆ. ಸಾಮಾನ್ಯವಾಗಿ ಬಿಟ್ಟು ಬಿಟ್ಟು ಮಳೆ ಸುರಿಯುವ ವೇಳೆ ಈ ಸಮಸ್ಯೆ ಕಾಣಿಸುತ್ತಿದೆ. 5-6 ದಿನಗಳಲ್ಲಿ ವಾಸಿಯಾಗುವ ಕಾಯಿಲೆ ಇದು. ಉಲ್ಬಣಿಸಿದರೆ ಪ್ರಾಥಮಿಕ, ಸಮು ದಾಯ ಆರೋಗ್ಯ ಕೇಂದ್ರಗಳಲ್ಲಿ ಸಂಬಂಧಿತ ಡ್ರಾಪ್ ಹಾಕಲಾಗುತ್ತದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು’ ಎಂದಿದ್ದಾರೆ.
ಮುನ್ನೆಚ್ಚರಿಕೆ ಅಗತ್ಯ
“ಕೆಂಗಣ್ಣು ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಕಾಯಿಲೆ. ಬಾಧಿತ ವ್ಯಕ್ತಿ ಕಣ್ಣನ್ನು ಮುಟ್ಟಿ ಅದೇ ಕೈಯಿಂದ ವಸ್ತುಗಳನ್ನು ಮುಟ್ಟಿದಾಗ ರೋಗಾಣುಗಳು ಅಲ್ಲಿಗೆ ಅಂಟಿಕೊಳ್ಳುತ್ತವೆ. ಆ ವಸ್ತುವನ್ನು ಮುಟ್ಟಿದ ವ್ಯಕ್ತಿಗೂ ಹರಡುತ್ತದೆ. ಆದ್ದರಿಂದ ಜಾಗ್ರತೆ ವಹಿಸುವುದೇ ಇದಕ್ಕಿರುವ ಮದ್ದು. ಕಣ್ಣಿನ ಶುಚಿತ್ವ ಕಾಪಾಡಿಕೊಳ್ಳಬೇಕು.
ಮಕ್ಕಳು ವಿಶೇಷವಾಗಿ ಮುನ್ನೆಚ್ಚರಿಕೆ ವಹಿಸಬೇಕು’ ಎನ್ನುತ್ತಾರೆ ನೇತ್ರ ತಜ್ಞ ಡಾ| ಕೀರ್ತನ್ ರಾವ್.
Related Articles
ಇದನ್ನೂ ಓದಿ : ಬದಿಯಡ್ಕದ ದಂತವೈದ್ಯ ಡಾ| ಕೃಷ್ಣಮೂರ್ತಿ ನಿಗೂಢ ಸಾವು: ತನಿಖೆಗೆ ವಿಶೇಷ ತಂಡ ರಚನೆ: ಎಸ್‌ಪಿ