Advertisement
ಮಂಗಳೂರು ನಗರದಲ್ಲಿ ಬಿಟ್ಟು ಬಿಟ್ಟು ಮಳೆಯಾಗಿತ್ತು. ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಕಲ್ಮಕಾರು, ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ, ಮಡಂತ್ಯಾರು, ಬಂಟ್ವಾಳ, ಕನ್ಯಾನ, ಸುರತ್ಕಲ್, ಉಳ್ಳಾಲ, ಮೂಡುಬಿದಿರೆ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆ ಮುಂದುವರಿದಿದೆ.
ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಆದರ್ಶ ನಗರದಲ್ಲಿ ಹಂಚಿನ ಮನೆಯೊಂದರ ಮೇಲೆ ಮರ ಬಿದ್ದು ವೃದ್ಧೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.ಮರ ಬಿದ್ದುದರಿಂದ ಕಮಲಾ (75) ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು ಸ್ಥಳೀಯರ ನೆರವಿನೊಂದಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಪುತ್ತೂರು: ಮನೆಗೆ ಹಾನಿ
ಪುತ್ತೂರು: ಭಾರೀ ಗಾಳಿಗೆ ಸೆಂಟ್ಯಾರು ಕೂರೇಲು ಸಮೀಪ ಹಂಚಿನ ಮನೆಯೊಂದಕ್ಕೆ ತೆಂಗಿನ ಮರವೊಂದು ಬಿದ್ದು ಮನೆ ಸಂಪೂರ್ಣ ಹಾನಿಗೊಂಡ ಘಟನೆ ಶನಿವಾರ ಸೆಂಟ್ಯಾರು ಸಮೀಪದ ಕೂರೇಲು ಎಂಬಲ್ಲಿ ನಡೆದಿದೆ.
Related Articles
Advertisement
ಮನೆ ಸಂಪೂರ್ಣ ಹಾನಿಗೊಂಡಿದ್ದರಿಂದ ಮನೆ ಮಂದಿಯನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ. ಆರ್ಯಾಪು ಗ್ರಾಮದ ಗ್ರಾಮಕರಣಿಕ ಅಶ್ವಿನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜು.17 ಮತ್ತು 18ರಂದು ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದ್ದು, ಎಲ್ಲೋ ಅಲರ್ಟ್ ಘೋಷಿಸಿದೆ. ಈ ವೇಳೆ ಗಾಳಿ-ಮಳೆ ಇರಲಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಿರುವ ನಿರೀಕ್ಷೆ ಇದೆ.
ಉಡುಪಿ: ಮತ್ತೆ ಬಿರುಸುಗೊಂಡ ಮಳೆಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ, ಶನಿವಾರ ಧಾರಕಾರ ಮಳೆಯಾಗಿದೆ. ಕಳೆದ ಎರಡು ದಿನ
ಗಳಿಂದ ಕ್ಷೀಣಗೊಂಡಿದ್ದ ಮಳೆ ಮತ್ತೆ ಬಿರುಸುಗೊಂಡಿದೆ. ಕಾಪು, ಪಡುಬಿದ್ರಿ, ಕುಂದಾಪುರ, ಕಾರ್ಕಳ, ಹೆಬ್ರಿ, ಅಜೆಕಾರು, ಸಿದ್ದಾಪುರ, ಬೈಂದೂರು, ಕುಂದಾಪುರ, ಉಡುಪಿ ಭಾಗದಲ್ಲಿ ಬಿಟ್ಟುಬಿಟ್ಟು ನಿರಂತರ ಮಳೆ ಸುರಿದಿದೆ. ಬ್ರಹ್ಮಾವರ ತಾಲೂಕಿನಲ್ಲಿ 4, ಕಾರ್ಕಳ 4, ಹೆಬ್ರಿ 4, ಬೈಂದೂರಿನಲ್ಲಿ 4 ಮನೆಗಳಿಗೆ ಹಾನಿ ಸಂಭವಿಸಿದೆ. ಮಳೆಗಾಳಿಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್, ಟಿಸಿಗಳಿಗೆ ಹಾನಿ ಮುಂದುವರಿದ ಪರಿಣಾಮ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಶನಿವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ ಉಡುಪಿ 31.3, ಬ್ರಹ್ಮಾವರ 57.4, ಕಾಪು 25.4, ಕುಂದಾಪುರ 119.9 ಬೈಂದೂರು 143.4, ಕಾರ್ಕಳ 49.8, ಹೆಬ್ರಿ 105.1ಮಿ .ಮೀ ಮಳೆಯಾಗಿದೆ. ಕುಂದಾಪುರ: ಸಾಲ್ಬುಡದಲ್ಲಿ ಮತ್ತೆ ನೆರೆ
ಕುಂದಾಪುರ: ಕುಂದಾಪುರದಾದ್ಯಂತ ಶನಿವಾರ ದಿನವಿಡೀ ಭಾರೀ ಮಳೆಯಾಗಿದೆ. ಇದಲ್ಲದೆ ಘಾಟಿ ಪ್ರದೇಶದಲ್ಲಿ ನಿರಂತರ ಮಳೆ ಯಾ ಗಿದ್ದರಿಂದ ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ ಪರಿಸರದಲ್ಲಿ ಮತ್ತೆ ನೆರೆಯಾಗಿದೆ ಮಾತ್ರ ವಲ್ಲದೇ ಎಕರೆಗಟ್ಟಲೆ ಗದ್ದೆಗಳು ಜಲಾವೃತ ಗೊಂಡಿವೆ. ಇದರಿಂದ ನಾವುಂದ ಕಡೆಗೆ ಬಂದಿದ್ದ ಜನ ಮನೆಗಳಿಗೆ ತೆರಳಲು ದೋಣಿ ಯನ್ನು ಆಶ್ರಯಿಸುವಂತಾಯಿತು. ಅರೆಹೊಳೆ – ನಾವುಂದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕಾಗಿದೆ. ಭಾರೀ ಮಳೆಯಿಂದ ಕುಂದಾಪುರ, ಬೈಂದೂರು ತಾಲೂಕಿನ 7 ಮನೆಗಳಿಗೆ ಹಾನಿಯಾಗಿದೆ. ಕಿರಿಮಂಜೇಶ್ವರ ಸರಕಾರಿ ಹಿ.ಪ್ರಾ. ಶಾಲೆಯ ಒಂದು ಬದಿಯ ಆವರಣ ಗೋಡೆಯು ಕುಸಿದಿದೆ.