Advertisement

ದಕ್ಷಿಣ ಕನ್ನಡ, ಉಡುಪಿಯ 7 ಪಿಎಚ್‌ಸಿಗಳಿಗೆ ಮೇಲ್ದರ್ಜೆ ಭಾಗ್ಯ

01:50 AM Jun 05, 2022 | Team Udayavani |

ಬಂಟ್ವಾಳ: ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು 100 ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 5 ಮತ್ತು ಉಡುಪಿ ಜಿಲ್ಲೆಯ 2 ಆರೋಗ್ಯ ಕೇಂದ್ರಗಳಿಗೆ ಮೇಲ್ದರ್ಜೆ ಭಾಗ್ಯ ದೊರಕಿದೆ.

Advertisement

ಪ್ರತೀ ಕೇಂದ್ರಕ್ಕೂ 10 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ.

30 ಬೆಡ್‌ಗಳಿಗೆ ಅವಕಾಶ
ಇಲಾಖೆಯ ನಿಯಮದ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳೆಂದರೆ 6 ಬೆಡ್‌ಗಳಿರುತ್ತವೆ. ಆದರೆ ಇಲ್ಲಿ ಒಳರೋಗಿಗಳಾಗಿ ದಾಖಲಾಗಲು ಅವಕಾಶಗಳಿಲ್ಲ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 30 ಬೆಡ್‌ಗಳಿದ್ದು, ಜತೆಗೆ ಸಾಮಾನ್ಯ ಕಾಯಿಲೆಯ ರೋಗಿಗಳನ್ನು ಒಳರೋಗಿಗಳಾಗಿ ದಾಖಲಿಸುವುದಕ್ಕೂ ಅವಕಾಶವಿದೆ. ಪ್ರಸ್ತುತ ಈ 7 ಆರೋಗ್ಯ ಕೇಂದ್ರಗಳು 30 ಬೆಡ್‌ಗಳೊಂದಿಗೆ ಮೇಲ್ದರ್ಜೆಗೇರಲಿವೆ. ಆಸ್ಪತ್ರೆಯ ಕಟ್ಟಡದ ಜತೆಗೆ ವೈದ್ಯರು, ಸಿಬಂದಿ ವಸತಿ ಕಟ್ಟಡವೂ ಒಳಗೊಂಡಿರುತ್ತದೆ.

ಕಟ್ಟಡ ನಿರ್ಮಾಣದ ಬಳಿಕ ಸಮುದಾಯ ಕೇಂದ್ರಕ್ಕೆ ಬೇಕಾಗುವ ಎಲ್ಲ ಸಲಕರಣೆಗಳ ವ್ಯವಸ್ಥೆ, ಹೆಚ್ಚುವರಿ ವೈದ್ಯರು, ಸಿಬಂದಿಯ ನೇಮಕಾತಿ ನಡೆಯಲಿದೆ.

ಮೇಲ್ದರ್ಜೆಗೇರುವ ಆಸ್ಪತ್ರೆಗಳು
1. ಬಂಟ್ವಾಳದ ಪುಂಜಾಲಕಟ್ಟೆ
2. ಬೆಳ್ತಂಗಡಿಯ ವೇಣೂರು
3. ಮೂಡುಬಿದಿರೆಯ ಶಿರ್ತಾಡಿ
4. ಕಡಬದ ನೆಲ್ಯಾಡಿ
5. ಪುತ್ತೂರಿನ ಪಾಣಾಜೆ
6. ಕಾಪು ತಾಲೂಕಿನ ಪಡುಬಿದ್ರಿ
7. ಕುಂದಾಪುರದ ಸಿದ್ದಾಪುರ

Advertisement

ದ.ಕ. ಜಿಲ್ಲೆಯಲ್ಲಿ 5 ಮತ್ತು ಉಡುಪಿ ಜಿಲ್ಲೆಯ 2 ಪಿಎಚ್‌ಸಿಗಳು ಮೇಲ್ದರ್ಜೆಗೇರಿದ್ದು, ಪ್ರಸ್ತುತ ಡಿಪಿಆರ್‌ ಹಂತದಲ್ಲಿದೆ. ಅನುದಾನ ಬಿಡುಗಡೆಗೊಂಡ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಉಭಯ ಜಿಲ್ಲೆಗಳ ಕಾಮಗಾರಿಯನ್ನು ಮಂಗಳೂರು ಉಪವಿಭಾಗವೇ ನೋಡಿಕೊಳ್ಳಲಿದೆ.
– ರಾಜೇಶ್‌ ರೈ
ಸಹಾಯಕ ಕಾ.ನಿ. ಎಂಜಿನಿಯರ್‌ (ಪ್ರಭಾರ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಂಜಿನಿಯರಿಂಗ್‌ ಘಟಕ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next