ಸಮ್ಮೇಳನದ ಎರಡನೇ ದಿನವಾದ ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ಉಪನ್ಯಾಸ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ತುಳು ನಾಟಕ, ಲಲಿತ ಪ್ರಬಂಧ ಗೋಷ್ಠಿ, ಅಗಲಿದ ಸಾಧಕರ ಸಂಸ್ಮರಣೆ ನಡೆದಿತ್ತು. ಅದೇ ರೀತಿ, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಗಣ್ಯರಿಂದ ಸಂವಾದಗಳು ನಡೆದವು. ಮುಖ್ಯ ಅತಿಥಿಗಳಾಗಿ ಅನೇಕ ಮಂದಿ ಗಣ್ಯರು ಭಾಗವಹಿಸಿದ್ದರು.
Advertisement
ಇಂದಿನ ಕಾರ್ಯಕ್ರಮದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಬೆಳಗ್ಗೆ 7.30ರಿಂದ 9 ಗಂಟೆಯ ವರೆಗೆ ವಾದ್ಯ ಗೋಷ್ಠಿ- ಚಿಂತನ- ಉದಯರಾಗ-ಯೋಗ ಪ್ರಾತ್ಯಕ್ಷಿಕೆ ನಡೆಯಲಿದ್ದು, ಬೆಳಗ್ಗೆ 9 ಗಂಟೆಯಿಂದ 9.30ರವರೆಗೆ “ದಾಸ ಸಾಹಿತ್ಯ-ವಚನ ಸಾಹಿತ್ಯ’ ವಿಶೇಷ ಉಪನ್ಯಾಸ, 10ರಿಂದ 11.15ರವರೆಗೆ “ರಾಷ್ಟ್ರೀಯ ಶಿಕ್ಷಣ ನೀತಿ’ ಎಂಬ ವಿಷಯದ ಕುರಿತು ಗೋಷ್ಠಿ, 11.15ರಿಂದ 11.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, 11.30ರಿಂದ 1 ಗಂಟೆಯ ವರೆಗೆ “ಆರೋಗ್ಯಕರ ಸಮಾಜ-ಸ್ವಾಸ್ಥ Â ಚಿಂತನೆ’ ಕುರಿತು ಗೋಷ್ಠಿ ನಡೆಯಲಿದೆ.
Related Articles
ಸಮ್ಮೇಳನದ ಅಂಗಣದಲ್ಲಿರುವ ಜಾರ್ಜ್ ಫೆರ್ನಾಂಡಿಸ್ ಪ್ರದರ್ಶನಾಂಗಣದಲ್ಲಿ ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಇವರಿಂದ ಚಿತ್ರಕಲಾ ಪ್ರದರ್ಶನ, ಮಾರಾಟ ಮಳಿಗೆ, ಶಾರದಾ ಆಯುರ್ವೇದ ಕಾಲೇಜು, ನ್ಯಾಚುರೋಪತಿ ಕಾಲೇಜಿನ ಆಶ್ರಯದಲ್ಲಿ “ವೈದ್ಯಕೀಯ ಮಾಹಿತಿ ಮಳಿಗೆ’ ಹಾಗೂ ಕೋವಿಡ್ ಅನಂತರದ ಸ್ವಾಸ್ಥ್ಯದ ಕುರಿತು ಅರಿವು ಮೂಡಿಸುವ ಪ್ರಾತ್ಯಕ್ಷಿಕೆ, ಪುಸ್ತಕ ಮಳಿಗೆಗಳ ಸಹಿತ ವಿವಿಧ ಗೃಹೋಪಯೋಗಿ, ಗುಡಿ ಕೈಗಾರಿಕ ವಸ್ತುಗಳ ಮಳಿಗೆ ಇದ್ದವು. ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರು ಮಳಿಗೆಗಳಿಗೆ ಭೇಟಿ ನೀಡಿ ಖರೀದಿಯಲ್ಲಿ ತೊಡಗುತ್ತಿದ್ದರು. ಸಮ್ಮೇಳನಕ್ಕೆ ಆಗಮಿಸಿದವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
Advertisement