Advertisement

Lok Sabha Election Results; ನೋಟಾದಲ್ಲೂ ದಕ್ಷಿಣ ಕನ್ನಡ ದಾಖಲೆ

11:49 PM Jun 05, 2024 | Team Udayavani |

ಕುಂದಾಪುರ: ರಾಜ್ಯದಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ 0.56ರಷ್ಟು ಮತಗಳು ಈ ಬಾರಿ ನೋಟಾ (ಮೇಲಿನ ಯಾರೂ ಅಲ್ಲ) ಮತಗಳಾಗಿವೆ. ಚುನಾವಣೆಯಿಂದ ಚುನಾ ವಣೆಗೆ ನೋಟಾ ಮತದಲ್ಲಿ ವ್ಯತ್ಯಾಸ ಆಗುತ್ತಿರುವುದು ಗಮನಾರ್ಹ. ರಾಜ್ಯದಒಟ್ಟು ಮತದಾನದಲ್ಲಿ ಕಳೆದ ಬಾರಿಗಿಂತ ಈ ಬಾರಿ ನೋಟಾ ಸಂಖ್ಯೆ ಇಳಿದಿದೆ.

Advertisement

ದೇಶದಲ್ಲಿ ದಾಖಲೆ
ಮಧ್ಯಪ್ರದೇಶದ ಇಂದೋರ್‌ ಕ್ಷೇತ್ರ2ನೇ ಅತಿ ಹೆಚ್ಚು ನೋಟಾ ಮತ ಗಳಿಸಿದೆ. 2,18,674 ನೋಟಾ ಬಿದ್ದಿದ್ದು 2019ರ ಚುನಾವಣೆ ಯಲ್ಲಿ ಬಿಹಾರದ ಗೋಪಾಲ್‌ಗ‌ಂಜ್‌ ಕ್ಷೇತ್ರದ ನೋಟಾ ದಾಖಲೆಯನ್ನು ಇಂದೋರ್‌ ಮುರಿದಿದೆ.

ಕಳೆದ ಚುನಾವಣೆಯಲ್ಲಿ ಗೋಪಾಲ್‌ಗಂಜ್ ನಲ್ಲಿ 51,660 ನೋಟಾಗೆ ಮತ ಚಲಾವಣೆಯಾಗಿತ್ತು. ಇಂದೋರ್‌ನಲ್ಲಿ ಬಿಜೆಪಿಯ ಶಂಕರ್‌ ಲಾಲ್‌ವಾನಿ 12,26,751 ಮತಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರೆ, ಉಳಿದ 13 ಅಭ್ಯರ್ಥಿಗಳು ನೋಟಾಕ್ಕಿಂತ ಕಡಿಮೆ ಮತ ಪಡೆದಿದ್ದಾರೆ.

ರಾಜ್ಯದಲ್ಲಿ ದಾಖಲೆ
ರಾಜ್ಯದಲ್ಲಿ ಬಿಜೆಪಿ ಶೇ. 46.06, ಕಾಂಗ್ರೆಸ್‌ ಶೇ. 45.43, ಜೆಡಿಎಸ್‌ ಶೇ. 5.6 ಮತಗಳನ್ನು ಪಡೆದರೆ ಪಕ್ಷಗಳಾದ ಬಿಎಸ್‌ಪಿ (0.33), ಸಿಪಿಐ (0.01) ಗಳಿಸಿದ್ದಕ್ಕಿಂತ ಅಧಿಕ ಮತ ಶೇ. 0.56 ಮತ ನೋಟಾಗೆ ಬಿದ್ದಿದೆ. ಅತಿಹೆಚ್ಚು ನೋಟಾ ಮತ ಚಲಾವಣೆಯಾದುದು ದ.ಕ. ಜಿಲ್ಲೆಯಲ್ಲಿ. ಅನಂತರದ ಸ್ಥಾನ ಬೆಂಗಳೂರು ಉತ್ತರಕ್ಕೆ. ಉಳಿದಂತೆ 10 ಸಾವಿರಕ್ಕಿಂತ ಹೆಚ್ಚು ನೋಟಾ ಮತ ಬಿದ್ದ ಕ್ಷೇತ್ರಗಳೆಂದರೆ ಬೆಂಗಳೂರು ಸೆಂಟ್ರಲ್‌, ಬೆಂಗಳೂರು ಗ್ರಾಮಾಂತರ, ಹಾವೇರಿ, ಉಡುಪಿ ಚಿಕ್ಕಮಗಳೂರು, ಉತ್ತರಕನ್ನಡ. ಅತಿ ಕಡಿಮೆ ನೋಟಾ ಮತ ಚಲಾವಣೆಯಾದುದು ಚಿಕ್ಕೋಡಿಯಲ್ಲಿ.

ಕ್ಷೇತ್ರವಾರು ನೋಟಾಗೆ
ಬಿದ್ದ ಮತಗಳ ವಿವರ
ಬಾಗಲಕೋಟೆ 3,420, ಬೆಂಗಳೂರು ಸೆಂಟ್ರಲ್‌ 12,126, ಬೆಂಗಳೂರು ಉತ್ತರ 13,554, ಬೆಂ. ಗ್ರಾ. 10,649, ಬೆಂ. ದಕ್ಷಿಣ 7,857, ಬೆಳಗಾವಿ 5,726, ಬಳ್ಳಾರಿ 7,889, ಬೀದರ್‌ 4,686, ವಿಜಯಪುರ 7,502, ಚಾಮರಾಜನಗರ 8,143, ಚಿಕ್ಕಬಳ್ಳಾಪುರ 6,596, ಚಿಕ್ಕೋಡಿ 2,608, ಚಿತ್ರದುರ್ಗ 3,190, ದಕ್ಷಿಣ ಕನ್ನಡ 23,576, ದಾವಣಗೆರೆ 3,176, ಧಾರವಾಡ 6,147, ಗುಲ್ಬರ್ಗ 8,429, ಹಾಸನ 8,541, ಹಾವೇರಿ 10,865, ಕೋಲಾರ 5,831, ಕೊಪ್ಪಳ 3,519, ಮಂಡ್ಯ 7,736, ಮೈಸೂರು 4,490, ರಾಯಚೂರು 9,850, ಶಿವಮೊಗ್ಗ 4,332, ತುಮಕೂರು 6,460, ಉಡುಪಿ ಚಿಕ್ಕಮಗಳೂರು 11,269, ಉತ್ತರಕನ್ನಡ 10,176.

Advertisement

ಕಳೆದ ಬಾರಿ
2019ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಶೇ. 51.38, ಕಾಂಗ್ರೆಸ್‌ಗೆ ಶೇ. 31.88, ಜೆಡಿಎಸ್‌ಗೆ ಶೇ. 9.67, ಬಿಎಸ್‌ಪಿಗೆ ಶೇ. 1.17 ಮತ ಚಲಾವಣೆಯಾಗಿದ್ದರೆ ನೋಟಾ ಪ್ರಭಾವ ಶೇ. 71ರಷ್ಟಿತ್ತು. ಈ ಬಾರಿ ಪ್ರಮಾಣ ಇಳಿಕೆಯಾಗಿದೆ. ಕಳೆದ ಬಾರಿ ಸಿಪಿಐ ಹಾಗೂ ಸಿಪಿಎಂ ತಲಾ ಶೇ. 0.05ರಷ್ಟು ಮತಗಳಿಸಿದ್ದವು. ಕಳೆದ ಬಾರಿ ದ.ಕ.ದಲ್ಲಿ 7,380, ಉಡುಪಿಯಲ್ಲಿ 7,518 ನೋಟಾ ಮತ ಚಲಾವಣೆಯಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next