Advertisement

Dakshina Kannada, ಉಡುಪಿಯಲ್ಲಿ ಪೊಲೀಸ್‌ ಹುತಾತ್ಮ ದಿನಾಚರಣೆ

12:18 AM Oct 22, 2023 | Team Udayavani |

ಮಂಗಳೂರು: ದೇಶ ಮತ್ತು ಸಮಾಜದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡುವ ಯೋಧರು ಮತ್ತು ಪೊಲೀಸರ ಕುಟುಂಬಗಳಿಗೆ ನಾವು ಏನು ಒದಗಿಸಿಕೊಟ್ಟಿದ್ದೇವೆ ಎನ್ನುವ ಬಗ್ಗೆ ಚಿಂತನೆ ನಡೆಸಬೇಕಾಗಿದ್ದು, ಹುತಾತ್ಮರ ಕುಟುಂಬಗಳಿಗೆ ನೀಡುವ ಸರಕಾರ ಇನ್ನಷ್ಟು ಹೆಚ್ಚು ಪರಿಹಾರ ನೀಡುವತ್ತ ಮನಸ್ಸು ಮಾಡಬೇಕು ಎಂದು ದ.ಕ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಹೇಳಿದರು.

Advertisement

ದಕ್ಷಿಣ ಕನ್ನಡ ಜಿಲ್ಲಾ ಡಿ.ಎ.ಆರ್‌. ಕಚೇರಿ ಆವರಣದಲ್ಲಿ ದ.ಕ. ಜಿಲ್ಲಾ ಪೊಲೀಸ್‌, ಮಂಗಳೂರು ನಗರ ಪೊಲೀಸ್‌ ಮತ್ತು ಕೆ.ಎಸ್‌.ಆರ್‌.ಪಿ.7ನೇ ಪಡೆ ವತಿಯಿಂದ ಜಂಟಿಯಾಗಿ ಆಯೋಜಿಸಲಾದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು 2022ರಿಂದ ಹುತಾತ್ಮರಾದ ಪೊಲೀಸ್‌ ಮತ್ತು ಭದ್ರತಾ ಸಿಬಂದಿಯ ಹೆಸರು ವಾಚಿಸಿದರು.

ಪಶ್ಚಿಮ ವಲಯ ಪೊಲೀಸ್‌ ಉಪ ಮಹಾನಿರೀಕ್ಷಕ ಡಾ| ಚಂದ್ರಗುಪ್ತ, ಕೋಸ್ಟ್‌ ಗಾರ್ಡ್‌ ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ, ಎಸ್‌ಪಿ ಸಿ.ಬಿ ರಿಷ್ಯಂತ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ. ಕರಿಕಾಳನ್‌, ಕೆಎಸ್‌ಆರ್‌ಪಿ 7ನೇ ಘಟಕದ ಕಮಾಂಡೆಂಟ್‌ ಬಿ.ಎಂ. ಪ್ರಸಾದ್‌, ಡಿಸಿಪಿ ದಿನೇಶ್‌ ಕುಮಾರ್‌ ಬಿ.ಪಿ., ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಧರ್ಮಪ್ಪ ಎನ್‌., ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಎಸಿಪಿಗಳಾದ ಉಮೇಶ್‌ ಪಿ., ಪರಮೇಶ್ವರ ಹೆಗಡೆ, ಡಿವೈಎಸ್‌ಪಿ ಡಾ| ಗಾನ ಪಿ.ಕುಮಾರ್‌, ಗೃಹರಕ್ಷಕ ದಳದ ಕಮಾಂಡೆಂಟ್‌ ಡಾ| ಮುರಳೀ ಮೋಹನ ಚೂಂತಾರು, ನಿವೃತ್ತ ಡಿವೈಎಸ್‌ಪಿ ವಿಶ್ವನಾಥ್‌ ಪಂಡಿತ್‌ ಉಪಸ್ಥಿತರಿದ್ದರು. ಬಂಟ್ವಾಳ ನಗರ ಠಾಣೆಯ ಸಿಬಂದಿ ವಿವೇಕ್‌ ನಿರ್ವಹಿಸಿದರು.

“ಕಾನೂನು ಪಾಲಿಸಿ, ಕರ್ತವ್ಯಕ್ಕೆ ಸಹಕರಿಸಿ’
ಉಡುಪಿ: ಜನರು ಕಾನೂನು ಪಾಲನೆಮೂಲಕ ಪೊಲೀಸರಿಗೆ ಅವರ ಕರ್ತವ್ಯ ನಿರ್ವಹಣೆ ಯಲ್ಲಿ ಸಹಕಾರ ನೀಡಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

Advertisement

ಶನಿವಾರ ಚಂದು ಮೈದಾನದಲ್ಲಿ ನಡೆದ ಪೊಲೀಸ್‌ ಹುತಾತ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಗಡಿ ಕಾಯುವ ಸೈನಿಕರು ಮರಣ ಹೊಂದಿದಾಗ ಅವರ ಬಗ್ಗೆ ಜನರು ಹೆಚ್ಚು ಮಾತನಾಡುತ್ತಾರೆ. ಆದರೆ ಶಾಂತಿ ಕಾಪಾಡುವಾಗ ಜನರ ರಕ್ಷಣೆ ಮಾಡುವಾಗ ಮರಣ ಹೊಂದಿದ ಪೊಲೀಸರ ಕರ್ತವ್ಯದ ಬಗ್ಗೆ ಮಾತನಾಡುವುದು ಕಡಿಮೆ. ಕೇವಲ ಒಂದು ದಿನದ ಬೇಸರ ವ್ಯಕ್ತಪಡಿಸಿ ಮತ್ತೆ ಅದನ್ನು ಮರೆತು ಬಿಡುತ್ತೇವೆ. ಮೊದಲಿಗಿಂತ ಈಗಿನ ಪೊಲೀಸ್‌ ವ್ಯವಸ್ಥೆ ಸುಧಾರಿಸಿದ್ದು, ಇದರಿಂದ ಪೊಲೀಸರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ಗೌರವ ಸೂಚಕವಾಗಿ 3 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ, ಸಿಐಡಿ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌, ಜಿ.ಪಂ. ಸಿಇಒ ಪ್ರಸನ್ನ ಎಚ್‌. ಅರಣ್ಯ ಇಲಾಖೆ ಕುಂದಾಪುರ ವಿಭಾಗ ಡಿಎಫ್ಒ ಉದಯ್‌ ನಾಯಕ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಟಿ. ಸಿದ್ದಲಿಂಗಪ್ಪ ಉಪಸ್ಥಿತರಿದ್ದರು. ಪಿಎಸ್‌ಐ ರಾಘವೇಂದ್ರ ನಿರೂಪಿಸಿ, ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next