ಮಂಗಳೂರು: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹಾಡೊಂದನ್ನು ಹಾಡುವ ಮೂಲಕ ಕರಾವಳಿ ಜನರ ಮನ ಗೆದ್ದಿದ್ದಾರೆ.
ಗುರುವಾರ ಸಂಜೆ ನಗರದ ಕಮಿಷನರ್ ಕಚೇರಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ಕಮಿಷನರೇಟ್ ಘಟಕದ ವತಿಯಿಂದ ಆಯೋಜಿಸಿದ್ದ ಸ್ನೇಹ ಸೌಹಾರ್ದ ಸಮ್ಮಿಲನದಲ್ಲಿ ಜಿಲ್ಲಾಧಿಕಾರಿ ಹಾಡಿದ ಹಾಡು ವೈರಲ್ ಆಗಿದ್ದು, ಕರಾವಳಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮೂಲತಃ ತಮಿಳುನಾಡಿನವರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳೂರಿನಲ್ಲಿ ತಮ್ಮ ಸೇವೆ ನೀಡುತ್ತಿದ್ದಾರೆ. ತುಳು ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ಅರಿತುಕೊಂಡಿರುವ ಅವರು ತುಳುನಾಡಿನ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.
ಇದನ್ನೂ ಓದಿ: Manipal: ಚಾಲಕನ ನಿಯಂತ್ರಣ ತಪ್ಪಿ ನಗರಸಭೆಯ ಪಂಪ್ ಹೌಸ್ ಗೆ ನುಗ್ಗಿದ ಕಾರು…