ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿ ಯಲ್ಲಿ ಕಳೆದ ಸುಮಾರು ಒಂದು ವರ್ಷ ದಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿ ಕೊಳ್ಳಲಾದ ಒಟ್ಟು 1,82,50,000 ರೂ. ಮೌಲ್ಯದ ಮಾದಕ ವಸ್ತುಗಳನ್ನು ರವಿವಾರ ನಾಶಪಡಿಸಲಾಯಿತು.
ಅಂ.ರಾ. ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನದ ಹಿನ್ನೆಲೆ ಯಲ್ಲಿ ಮೂಲ್ಕಿಯ ರಾಮ್ ಎನರ್ಜಿ ಆ್ಯಂಡ್ ಎನ್ವಿರಾನ್‌ಮೆಂಟ್ ಲಿ.ನಲ್ಲಿ ಮಾದಕ ವಸ್ತುಗಳನ್ನು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವಿಲೇವಾರಿ ಮಾಡಲಾಯಿತು.
ಕಮಿಷನರೆಟ್ ವ್ಯಾಪ್ತಿ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಒಟ್ಟು 15 ಪ್ರಕರಣಗಳಲ್ಲಿ ವಶಪಡಿಸಿ ಕೊಳ್ಳಲಾಗಿದ್ದ 1,16,17,200 ರೂ. ಮೌಲ್ಯದ 580.860 ಕೆಜಿ ಗಾಂಜಾ, 1,37,500 ರೂ. ಮೌಲ್ಯದ 25 ಗ್ರಾಂ ಹೆರಾಯ್ನ ಮತ್ತು 11,20,000 ರೂ. ಮೌಲ್ಯದ 320 ಗ್ರಾಂ ಎಂಡಿಎಂಎ ನಾಶಪಡಿಸಲಾಯಿತು.
ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿಗಳಾದ ರವೀಶ್ ನಾಯಕ್, ಗೀತಾ ಕುಲಕರ್ಣಿ, ಮೂಲ್ಕಿ ಇನ್‌ಸ್ಪೆಕ್ಟರ್ ಕುಸುಮಾಧರ್ ಉಪಸ್ಥಿತರಿದ್ದರು.
Related Articles
ಜಿಲ್ಲಾ ಪೊಲೀಸ್ ವ್ಯಾಪ್ತಿ
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 11 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 23,75,300 ರೂ. ಮೌಲ್ಯದ 53 ಕೆಜಿ 128 ಗ್ರಾಂ ಗಾಂಜಾ ಮತ್ತು 30 ಲ.ರೂ. ಮೌಲ್ಯದ 120 ಗ್ರಾಂ ಹೆರಾಯ್ನ ಅನ್ನು ನಾಶಪಡಿಸಲಾಯಿತು. ಎಸ್‌ಪಿ ಹೃಷಿಕೇಶ್ ಸೋನಾವಣೆ, ಬಂಟ್ವಾಳ ಉಪವಿಭಾಗದ ಸ. ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ್, ಪೊಲೀಸ್ ಉಪಾಧೀಕ್ಷಕಿ ಡಾ| ಗಾನ ಕುಮಾರ್ ಉಪಸ್ಥಿತರಿದ್ದರು.
ಉಡುಪಿ: 3.27ಲಕ್ಷ ರೂ.
ಮಾದಕ ಪದಾರ್ಥ ನಾಶ
ಪಡುಬಿದ್ರಿ: ಜಿಲ್ಲೆಯ ವಿವಿಧ ಠಾಣೆ ಗಳಲ್ಲಿನ ಒಟ್ಟು 19 ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿದ್ದ 3.27 ಲಕ್ಷ ರೂ. ಬೆಲೆಯ 9.686 ಕೆಜಿ ಗಾಂಜಾ ಮತ್ತು 410 ಗ್ರಾಂ ಚರಸ್‌ಗಳನ್ನು ನಂದಿಕೂರಿನ ಕೈಗಾರಿಕ ಪ್ರಾಂಗಣದಲ್ಲಿರುವ ಆಯುಷ್ ಎನ್ವಿರೋಟೆಕ್ ಯುನಿಟ್‌ನಲ್ಲಿ ದಹಿಸಿ ನಾಶಪಡಿಸಲಾಯಿತು.
ಎಸ್‌ಪಿ ಎನ್. ವಿಷ್ಣುವರ್ಧನ, ಹೆಚ್ಚುವರಿ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ, ಸಮಿತಿಯ ಸದಸ್ಯರಾದ ಉಡುಪಿ ಡಿವೈಎಸ್ಪಿ ಸುಧಾಕರ್ ಸದಾನಂದ ನಾಯ್ಕ, ಕಾರ್ಕಳ ವಿಭಾಗದ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ಇದ್ದರು.
ಮಣಿಪಾಲ ಮತ್ತು ಸೆನ್ ಅಪರಾಧ ಠಾಣೆಯ ತಲಾ 4 ಪ್ರಕರಣಗಳು, ಕುಂದಾಪುರ ಮತ್ತು ಕಾಪು ಠಾಣೆಯ ತಲಾ 3, ಕೋಟ ಮತ್ತು ಗಂಗೊಳ್ಳಿ ಠಾಣೆಯ ತಲಾ 2 ಹಾಗೂ ಮಲ್ಪೆ ಪೊಲೀಸ್ ಠಾಣೆಯ ಒಂದು ಪ್ರಕರಣವು ಒಳಗೊಂಡಿವೆ. 4 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಯಾಗಿದೆ. 4 ಪ್ರಕರಣಗಳಲ್ಲಿ ಆರೋಪಿ ಗಳನ್ನು ಖುಲಾಸೆಗೊಳಿಸಲಾಗಿದೆ.
ಒಂದು ಪ್ರಕರಣದಲ್ಲಿ ಆರೋಪಿ ಮೃತನಾಗಿದ್ದು ಇತರ 8 ಪ್ರಕರಣಗಳು ನ್ಯಾಯಾಲಯ ದಲ್ಲಿವೆ. 2 ಪ್ರಕರಣಗಳು ತನಿಖೆಯಲ್ಲಿವೆ.