Advertisement

ದ.ಕನ್ನಡ: 33 ಮಂದಿಗೆ ಕೋವಿಡ್ ದೃಢ

07:04 AM Jun 27, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 33 ಮಂದಿಗೆ ಕೊರೊನಾ ದೃಢಪಟ್ಟಿದೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 517ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 15 ಮಂದಿ ಸೌದಿ ಅರೇಬಿಯಾ, ದಮಾಮ್‌, ಕತಾರ್‌ನಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದವರು. 10 ಮಂದಿ ಈ ಹಿಂದೆ ಸೋಂಕಿಗೊಳಗಾದ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ವುಳ್ಳವರಾಗಿದ್ದು, ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕೋವಿಡ್ ದೃಢಪಟ್ಟ 62 ವರ್ಷದ ವ್ಯಕ್ತಿಯ
ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. 53 ವರ್ಷದ ವ್ಯಕ್ತಿ ಅಂತರ್‌ ಜಿಲ್ಲಾ ಸಂಚಾರ ನಡೆಸಿದ್ದು, ಕೊರೊನಾ ಬಂದಿರುವ ಸಾಧ್ಯತೆ ಇದೆ. ಮಂಗಳೂರಿನ 25 ವರ್ಷದ ಯುವಕ, 51, 30 ವರ್ಷದ ವ್ಯಕ್ತಿ ಹಾಗೂ ಪುತ್ತೂರಿನ 24 ವರ್ಷದ ಯುವಕ ಇನ್‌ಫ್ಲೂಯೆನಾl ಲೈಕ್‌ ಇಲ್‌ನೆಸ್‌ನಿಂದ ಬಳಲುತ್ತಿದ್ದು, ಕೋವಿಡ್ ದೃಢಪಟ್ಟಿದೆ. ಮಂಗಳೂರಿನ 25 ವರ್ಷದ ಯುವತಿ, 38 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆಗೆ ಆಸ್ಪತ್ರೆಗೆ ದಾಖಲಾಗಿದ್ದಾಗ ಕೋವಿಡ್ ದೃಢಪಟ್ಟಿದೆ.

Advertisement

34 ಮಂದಿ ಬಿಡುಗಡೆ; ನಾಲ್ವರು ಐಸಿಯುವಿನಲ್ಲಿ
ಕೋವಿಡ್ ದೃಢಪಟ್ಟು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 34 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಗೊಂಡಿದ್ದಾರೆ. 49 ವರ್ಷದ ವ್ಯಕ್ತಿ ಡಯಾಬಿಟಿಸ್‌, ನ್ಯುಮೋನಿಯಾದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 57 ವರ್ಷದ ಮಹಿಳೆ ಲಿವರ್‌ ಕಾಯಿಲೆ, ಡಯಾಬಿಟಿಸ್‌, ಹೃದಯರೋಗ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು ಐಸಿಯುನಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. 59 ವರ್ಷದ ವ್ಯಕ್ತಿ ಹೃದಯರೋಗ, ನ್ಯುಮೋನಿಯಾದಿಂದ ಬಳಲುತ್ತಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 78 ವರ್ಷದ ವೃದ್ಧ ಡಯಾಬಿಟಿಸ್‌, ಅಧಿಕ ರಕ್ತದೊತ್ತಡ, ಪಾರ್ಕಿನ್ಸ‌ನ್‌ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

202 ವರದಿ ಬರಲು ಬಾಕಿ
ವೆನ್ಲಾಕ್‌ ಆಸ್ಪತ್ರೆಯಲ್ಲಿ ಶುಕ್ರವಾರ ಒಟ್ಟು 303 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷಾ ವರದಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 33 ಪಾಸಿಟಿವ್‌, 270 ನೆಗೆಟಿವ್‌ ಆಗಿದೆ. ಒಟ್ಟು 202 ವರದಿ ಬರಲು ಬಾಕಿ ಇದ್ದು, ಹೊಸದಾಗಿ 280 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next