Advertisement

ಡೈರಿ ವಾರ್; ದಿನೇಶ್ ಗುಂಡೂರಾವ್ ವಿರುದ್ಧ ಎಫ್ ಐಆರ್ ದಾಖಲು

06:05 PM Mar 01, 2017 | Team Udayavani |

ಬೆಂಗಳೂರು: ಡೈರಿ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ ಸಿ ಲೆಹರ್ ಸಿಂಗ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ದಿನೇಶ್ ಗುಂಡೂರಾವ್ ಅವರು ನನ್ನ ವಿರುದ್ಧ ನಕಲಿ ಡೈರಿ ಬಿಡುಗಡೆ ಮಾಡಿದ್ದಾರೆ. ಅದು ನನ್ ಡೈರಿಯಲ್ಲ, ಅದು ನನ್ನ ಸಹಿಯೂ ಅಲ್ಲ ಎಂದು ದೂರಿನಲ್ಲಿ ತಿಳಿಸಿರುವ ಲೆಹರ್ ಸಿಂಗ್, ಡೈರಿ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. 

ಗೋವಿಂದರಾಜು ಮನೆಯಲ್ಲಿ ಸಿಕ್ಕಿರುವುದು ನಿಜವಾದ ಡೈರಿ, ಆದರೆ ನನ್ನ ವಿರುದ್ಧ ನಕಲಿ ಡೈರಿ ಸೃಷ್ಟಿ ಮಾಡಿ ಬಿಡುಗಡೆ ಮಾಡಿದ್ದಾರೆ. ಯಾರೂ ಕೂಡಾ ಡೈರಿಯಲ್ಲಿ ಸಹಿ ಮಾಡಲ್ಲ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next